---Advertisement---

ರಾಜ್ಯದ ರೈತರಿಗಾಗಿ ಸಿಹಿ ಸುದ್ದಿ! ಸ್ಪ್ರಿಂಕ್ಲರ್ ಸೇಟ್‌ಗಳಿಗೆ ಈಗ ಶೇ 90 ರಷ್ಟು ಸಹಾಯಧನ ದೊರಕಲಿದೆ!

On: December 12, 2025 11:49 AM
Follow Us:
90% subsidy for prinkler । ಸ್ಪ್ರಿಂಕ್ಲರ್

Join WhatsApp

Join Now

Join Telegram

Join Now

ಪ್ರತಿ ವರ್ಷವೂ ಕೃಷಿ ಇಲಾಖೆಯು ಬೇಸಿಗೆ, ಹಿಂಗಾರು ಹಂಗಾಮಿನಲ್ಲಿ ಬೆಳೆಗಳಿಗೆ ನೀರನ್ನು ಕಡಿಮೆ ಖರ್ಚಿನಲ್ಲಿ ಒದಗಿಸಲು ತುಂತುರು ನೀರಾವರಿ ಘಟಕಗಳು ಹಾಗೂ ಸ್ಪ್ರಿಂಕ್ಲರ್ ಸೆಟ್‌ಗಳ ಮೇಲೆ ಭಾರೀ ಸಹಾಯಧನ ನೀಡುತ್ತಾ ಬಂದಿದೆ. ಈ ವರ್ಷವೂ ಅದೇ ತರಹ, ಶೇ 90 ರಷ್ಟು ನೆರವಿನೊಂದಿಗೆ ಈ ಯೋಜನೆಗಾಗಿ ಅರ್ಜಿ ಆಹ್ವಾನಿಸಲಾಗಿದೆ.

ಕರ್ನಾಟಕದಲ್ಲಿ ಒಣಭೂಮಿಯ ಪ್ರಮಾಣವು ಎರಡನೆ ಸ್ಥಾನದಲ್ಲಿದ್ದು, ಸುಮಾರು 66% ಪ್ರದೇಶವು ಮಳೆಯಾಶ್ರಿತ ಕೃಷಿ ಮೇಲೆ ಅವಲಂಬಿತವಾಗಿದೆ. ನೀರಾವರಿ ಸೌಲಭ್ಯವಿರುವ ಪ್ರದೇಶ ಕೇವಲ 34%, ಆದ್ದರಿಂದ ಬೆಳೆಗಳಿಗೆ ನೀರು ನೀಡುವುದು ಅತ್ಯಂತ ಅಗತ್ಯ.

2003-04 ರಿಂದ ಹನಿ ಮತ್ತು ತುಂತುರು ನೀರಾವರಿ ಘಟಕಗಳಿಗೆ ಶೇ 90 ರಷ್ಟು ಸಹಾಯಧನ ನೀಡುವ ಸೂಕ್ಷ್ಮ ನೀರಾವರಿ ಯೋಜನೆ (Pradhan Mantri Krishi Sinchayee Yojana) ಯಶಸ್ವಿಯಾಗಿ ಕಾರ್ಯನಿರ್ವಹಿಸುತ್ತಿದೆ.

ಸ್ಪ್ರಿಂಕ್ಲರ್ ಸೆಟ್‌ಗಳಿಗೆ Subsidy amountನೀಡಲಾಗುತ್ತದೆ?

  • 2 ಹೆಕ್ಟೇರ್ ಗೆ (5 ಎಕರೆ) ವರೆಗೆ ರೈತರು ಸ್ಪ್ರಿಂಕ್ಲರ್‌ಗಳ ಖರೀದಿಗೆ 90% ಸಹಾಯಧನ ಪಡೆಯುತ್ತಾರೆ.
  • ಈ ವರ್ಷ, 30 ಪೈಪ್ ಮತ್ತು 5 ಜೆಟ್‌ಗಳ ಒಟ್ಟು ಬೆಲೆ ರೂ. 23,568/- ಆಗಿದ್ದು, ರೈತರ ಪಾಲಿಗೆ ರೂ. 4,139/- ಮಾತ್ರ ಪಾವತಿಸಬೇಕಾಗುತ್ತದೆ.
  • 2 ಹಕ್ಟೇರ್ ಮೀರಿ ಪ್ರದೇಶಗಳಿಗಾಗಿ ಸಹಾಯಧನ ಶೇ 45 ರಷ್ಟು ಇರಲಿದೆ.

ಇದನ್ನೂ ಓದಿರಿ: Toilet Subsidy: ಸ್ವಚ್ಛ ಭಾರತ್ ಯೋಜನೆಯಲ್ಲಿ ಶೌಚಾಲಯ ನಿರ್ಮಾಣಕ್ಕೆ ₹12,000 ಸಹಾಯಧನ – ಅರ್ಹತೆ ಮತ್ತು ಅರ್ಜಿ ವಿಧಾನ

ಅರ್ಜಿ ಸಲ್ಲಿಸಲು ಬೇಕಾದ ಅಂಶಗಳು

  • ಎಲ್ಲಾ ವರ್ಗದ ರೈತರಿಗೂ ಅರ್ಜಿ ಸಲ್ಲಿಸಲು ಅವಕಾಶ.
  • ಸ್ಪ್ರಿಂಕ್ಲರ್ ಸೆಟ್ ಒಮ್ಮೆ ಪಡೆದವರು 7 ವರ್ಷಗಳ ಬಳಿಕವೇ ಪುನಃ ಅರ್ಜಿ ಹಾಕಬಹುದಾಗಿದೆ.
  • ಅರ್ಜಿ ಸಲ್ಲಿಸಲು ಬೆಳೆ ಹತ್ತಿದ ಜಮೀನಿನಲ್ಲಿ ನೀರಾವರಿ ಮೂಲ (ಕೊಳವೆ, ಬಾವಿ, ಹೊಂಡ) ಇರುವುದು ಅಗತ್ಯ.

ಅಗತ್ಯ ದಾಖಲೆಗಳು

  • ಪಹಣಿ / ಉತಾರ್ / RTC
  • ನೀರಾವರಿ ಸಾಂದರ್ಭಿಕ ಧೃಡೀಕರಣ ಪತ್ರ (ಗ್ರಾಮ ಲೆಕ್ಕಾಧಿಕಾರಿಗಳ ಬಳಿ)
  • ಎರಡು ಫೋಟೋಗಳು
  • 100 ರೂ ಛಾಪಾ ಕಾಗದ
  • ಆಧಾರ್ ಕಾರ್ಡ್ ಪ್ರತಿಗಳು
  • ಬ್ಯಾಂಕ್ ಪಾಸ್ ಬುಕ್ ಪ್ರತಿ
  • ಜಾತಿ ಪ್ರಮಾಣಪತ್ರ (ಪಿ ಜಾತಿ/ಪ.ಪಂಗಡ ರೈತರಿಗೆ ಮಾತ್ರ)
  • ಬೆಳೆ ಧೃಡೀಕರಣ ಪತ್ರ

ಇದನ್ನೂ ಓದಿರಿ: ರೈತರಿಗೆ ಬಂಪರ್ ಕೊಡುಗೆ: ನಮ್ಮ ಹೊಲ ನಮ್ಮ ದಾರಿ ಯೋಜನೆಗೆ ಚಾಲನೆ! ಈಗ ನಿಮ್ಮ ಜಮೀನಿಗೂ ಸಿಗಲಿದೆ ಪಕ್ಕಾ ರಸ್ತೆ ಸಂಪರ್ಕ!

ಅರ್ಜಿ ಸಲ್ಲಿಸುವ ಸ್ಥಳ:

ನಿಮ್ಮ ಹೋಬಳಿ ರೈತ ಸಂಪರ್ಕ ಕೇಂದ್ರಕ್ಕೆ ಸಮಸ್ತ ದಾಖಲೆಗಳೊಂದಿಗೆ ಭೇಟಿ ನೀಡಿ, ಅರ್ಜಿ ಸಲ್ಲಿಸಿ.

ಆನ್ ಲೈನ್ ಅರ್ಜಿ ಸಲ್ಲಿಕೆ

  • ಆನ್ ಲೈನ್ ನಲ್ಲಿ ಅರ್ಜಿ ಸಲ್ಲಿಸಲು https://kkisan.karnataka.gov.in ಗೆ ಭೇಟಿ ನೀಡಿ.
  • ನಂತರ “ಸೂಕ್ಷ್ಮ ನೀರಾವರಿ ಅರ್ಜಿ ನೋಂದಣಿ” ಮೇಲೆ ಕ್ಲಿಕ್ ಮಾಡಿ.
  • ಮುಂದಿನ ಪುಟದಲ್ಲಿ ನಿಮ್ಮ ಆಧಾರ್ ಸಂಖ್ಯೆ ನಮೂದಿಸಿ, FID ಕಂಡುಕೊಳ್ಳಿ.
  • ಮುಂದಿನ ಅರ್ಜಿ ನಮೂನೆಯಲ್ಲಿ ಕೇಳಲಾಗಿರುವ ಮಾಹಿತಿಗಳನ್ನು ಭರ್ತಿ ಮಾಡಿರಿ.
  • ಅರ್ಜಿಯಲ್ಲಿ ಕೇಳಲಾಗಿರುವ ದಾಖಲೆಗಳ ಸ್ಕ್ಯಾನ್ ಪ್ರತಿಯನ್ನು ಅಪ್ಲೋಡ್ ಮಾಡಿರಿ.
  • ನೀವು ನೀಡಿರುವ ಮಾಹಿತಿಗಳನ್ನು ಮತ್ತು ದಾಖಲೆಗಳನ್ನು ಮತ್ತೊಮ್ಮೆ ಪರಿಶೀಲಿಸಿ ಅರ್ಜಿಯನ್ನು ಸಲ್ಲಿಸಿರಿ.
  • ಅರ್ಜಿ ಸಲ್ಲಿಕೆಯ ನಂತರ, ಸಲ್ಲಿಕೆ ಸಂಖ್ಯೆಯನ್ನು ಉಳಿಸಿಕೊಳ್ಳಿ.

ಅರ್ಜಿಗಳನ್ನು ಅಧಿಕಾರಿಗಳು ಪರಿಶೀಲಿಸಿ ಆನ್‌ಲೈನ್ ನಲ್ಲಿ ಅಪ್ಲೋಡ್ ಮಾಡಲಾಗುತ್ತದೆ. ಅರ್ಹರಾದವರಿಗೆ ಪೈಪ್ ಸರಬರಾಜು ಕಂಪನಿಗೆ RTGS ಮೂಲಕ ವಂತಿಕೆ ನೀಡುವಂತೆ ಸೂಚನೆ ಬರುವುದು.

ಈ ನಂತರ ರೈತರು ತಮ್ಮ ಬ್ಯಾಂಕ್ ಮೂಲಕ ಪೈಪ್ ದರವನ್ನು ಪಾವತಿಸಿ, ಪಾವತಿಸಿದ ಸ್ಲಿಪ್ ಅನ್ನು ರೈತ ಸಂಪರ್ಕ ಕೇಂದ್ರದಲ್ಲಿ ಸಲ್ಲಿಸಿದ ಮೇಲೆ ಪೈಪ್ ಮತ್ತು ಸ್ಪ್ರಿಂಕ್ಲರ್ ತಪ್ಪದೆ ಲಭಿಸುತ್ತದೆ. ಇದು ನಿಮ್ಮ ಹೊಲಕ್ಕೆ ಹನಿ ನೀರಾವರಿಯ ವೆಚ್ಚವನ್ನು ಕಡಿಮೆಗೊಳಿಸಿ, ನೀರುಣಿಸಿ ಬೆಳೆ ಬೆಳೆಯಲು ಸಹಾಯ ಮಾಡುತ್ತದೆ. ಸರಕಾರದಿಂದ ದೊರೆಯುವ ಈ ಅವಕಾಶವನ್ನು ತಪ್ಪಿಸಿಕೊಳ್ಳಬೇಡಿ!

Mahesh Kumar M.

ನಾನು 2020 ರಿಂದ ಡಿಜಿಟಲ್ ಪತ್ರಿಕೋದ್ಯಮದಲ್ಲಿ ತೊಡಗಿಸಿಕೊಂಡಿದ್ದೆನೆ. ಸಧ್ಯ gjiet.com ಮೂಲಕ ಓದುಗರಿಗೆ ನಿಖರ, ನೈಜ ಮತ್ತು ಸವಿವರವಾದ ಮಾಹಿತಿಯನ್ನು ತಲುಪಿಸುವ ಪ್ರಯತ್ನ ಮಾಡುತ್ತಿದ್ದೇನೆ. ವಿಶೇಷವಾಗಿ ಉದ್ಯೋಗ ಮತ್ತು ಸರಕಾರಿ ಯೋಜನೆಗಳ ಕುರಿತಾಗಿ ಆಳವಾದ ಅಧ್ಯಯನವನ್ನು ಮಾಡಿದ್ದು, ಓದುಗರಿಗೆ ಉದ್ಯೋಗದ ಮತ್ತು ಸರಕಾರಿ ಯೋಜನೆಗಳ ಮಾಹಿತಿಯನ್ನು ತಲುಪಿಸುವ ಗುರಿಯನ್ನು ಇಟ್ಟುಕೊಂಡಿದ್ದೇನೆ.

Latest Post

5 thoughts on “ರಾಜ್ಯದ ರೈತರಿಗಾಗಿ ಸಿಹಿ ಸುದ್ದಿ! ಸ್ಪ್ರಿಂಕ್ಲರ್ ಸೇಟ್‌ಗಳಿಗೆ ಈಗ ಶೇ 90 ರಷ್ಟು ಸಹಾಯಧನ ದೊರಕಲಿದೆ!”

  1. ಮುಕ್ತ ಮಾರುಕಟ್ಟೆಯಲ್ಲಿಯೇ ಏಳರಿಂದ ಎಂಟು ಸಾವಿರಕ್ಕೆ ಸಿಗುವ ಪೈಪ್ ಮತ್ತು ಸ್ಪ್ರಿಂಕ್ಲರ್ ಸೆಟ್ ಗಳನ್ನು ಇಪ್ಪತ್ತು ಸಾವಿರಕ್ಕೆ ಕೊಡ್ತಾರೆ ಅಂದ್ರೆ, ಎಂತಾ ದೊಡ್ಡ SCAM ಇರಬಹುದು ಯೋಚಿಸಿ…

    Reply
    • ಹೌದು, 300 ರೂಪಾಯಿ ಪೈಪ್. ×30=9000
      400ರೂಪಾಯಿ ಜೆಟ್ ×5=2000
      L ಬೆಂಡು, T, endcap ಇತ್ಯಾದಿ 500= ಎಲ್ಲಾ ಸೇರಿ ಒಟ್ಟು 11,500.

      Reply

Leave a Comment