ಕರ್ನಾಟಕದಲ್ಲಿ ಕೃಷಿ ಸಂಕಷ್ಟವನ್ನು ಎದುರಿಸುತ್ತಿರುವ ಲಕ್ಷಾಂತರ ರೈತರಿಗೆ ಸರ್ಕಾರದ ಭಾರಿ ಶುಭಸುದ್ದಿಯೊಂದು ಹೊರಬಿದ್ದಿದೆ! ಮುಂಗಾರು ಮಳೆಯ ಅತಿವೃಷ್ಟಿಯಿಂದ ನಷ್ಟವಾದ ಬೆಳೆ ಹಾನಿಗೆ ಪರಿಹಾರವಾಗಿ ರಾಜ್ಯ ಸರ್ಕಾರ 1,033.60 ಕೋಟಿ ರೂಪಾಯಿ ಹೆಚ್ಚುವರಿ ಸಹಾಯ ಘೋಷಿಸಿದೆ. ಈ ಬೃಹತ್ ಹಣ ಬಿಡುಗಡೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕೈ ಹಾಕಿದ್ದಾರೆ.
ಈ ಹೆಚ್ಚುವರಿ ಪರಿಹಾರ ಹಣದ ಮೂಲಕ ರೈತರಿಗೆ ಒಟ್ಟು 2,251.63 ಕೋಟಿ ರೂಪಾಯಿ ಬೆಳೆ ನಷ್ಟ ಪರಿಹಾರವಾಗಿ ಸರಕಾರ ನೀಡುತ್ತಿದೆ. ಇದೇ ರಾಜ್ಯದ ಇತಿಹಾಸದಲ್ಲಿ ಒಂದೇ ದಿನದಲ್ಲಿ ನೀಡಲಾದ ಅತ್ಯಂತ ದೊಡ್ಡ ಬೆಳೆ ಪರಿಹಾರ ಪ್ಯಾಕೇಜ್ ಆಗಿದೆ! ಈಗಾಗಲೇ 14.24 ಲಕ್ಷಕ್ಕೂ ಅಧಿಕ ರೈತರು ತಮ್ಮ ಆಧಾರ್-ಲಿಂಕ್ ಬ್ಯಾಂಕ್ ಖಾತೆಗಳಿಗೆ ಈ ಹಣವನ್ನು ನೇರವಾಗಿ ಸ್ವೀಕರಿಸಲು ಆರಂಭಿಸಿದ್ದಾರೆ.
ಬೆಳೆ ಪ್ರಕಾರಕ್ಕೆ ಅನುಗುಣವಾದ ಪರಿಹಾರ
- ಮಳೆಯಾಶ್ರಿತ ಬೆಳೆಗಳು (ತೊಗರಿ, ಹೆಸರು, ಮೆಕ್ಕೆಜೋಳ, ಹತ್ತಿ, ರಾಗಿ) – 8,500 ರಿಂದ 17,000 ರೂ. ಪ್ರತಿ ಹೆಕ್ಟೇರ್
- ನೀರಾವರಿ ಬೆಳೆಗಳು (ಭತ್ತ, ಕಬ್ಬು ಇತ್ಯಾದಿ) – 17,000 ರಿಂದ 25,500 ರೂ. ಪ್ರತಿ ಹೆಕ್ಟೇರ್
- ಬಹುವಾರತ್ಮಕ ಬೆಳೆಗಳು (ತೆಂಗು, ಬಾದಾಮಿ, ಕಾಫಿ, ಕಿತ್ತಳೆ, ದ್ರಾಕ್ಷಿ) – 22,500 ರಿಂದ 31,000 ರೂ. ಪ್ರತಿ ಹೆಕ್ಟೇರ್
ಉದಾಹರಣೆಗೆ, 1.5 ಹೆಕ್ಟೇರ್ ತೊಗರಿ ಬೆಳೆ ಹಾನಿಗೊಂಡ ರೈತರಿಗೆ 25,500 ರೂ. ನೇರ ಪರಿಹಾರ!
ಇದನ್ನೂ ಓದಿರಿ: Tata Capital Pankh Scholarship: ಟಾಟಾ ಕ್ಯಾಪಿಟಲ್ ವತಿಯಿಂದ ವಿದ್ಯಾರ್ಥಿಗಳಿಗೆ 1 ಲಕ್ಷಗಳವರೆಗೆ ಸಿಗಲಿದೆ ವಿದ್ಯಾರ್ಥಿವೇತನ !
ಮುಖ್ಯವಾಗಿ ಹಾನಿಗೊಂಡ ಜಿಲ್ಲೆಗಳು
14.58 ಲಕ್ಷ ಹೆಕ್ಟೇರ್ ಭೂಮಿಯ ಬೆಳೆ ಹಾನಿ ಆಗಿದ್ದು, ನಷ್ಟದ ಮೊತ್ತ 10,748 ಕೋಟಿ ರೂ. ತಲುಪಿದೆ. ಧಾರವಾಡ, ಗದಗ, ಹಾವೇರಿ, ಬೆಳಗಾವಿ, ಬಾಗಲಕೋಟೆ, ವಿಜಯನಗರ, ಕಲಬುರಗಿ ಸೇರಿದಂತೆ 10 ಜಿಲ್ಲೆಗಳು ಹೆಚ್ಚು ಅತಿವೃಷ್ಟಿಯ ಪ್ರಭಾವಕ್ಕೆ ಒಳಗಾಗಿವೆ.
ಪರಿಹಾರ ಪಡೆಯಲು ಏನು ಮಾಡಬೇಕು?
- ರೈತರ ಆಧಾರ್ ಕಾರ್ಡ್ ಬ್ಯಾಂಕ್ ಖಾತೆ ಜೊತೆ ಲಿಂಕ್ ಆಗಿರಬೇಕು
- ಫ್ರೂಟ್ಸ್ (FRUITS) ತಂತ್ರಾಂಶದಲ್ಲಿ ನೋಂದಣಿ ಅಗತ್ಯ
- ಹಾನಿ ವಿವರಗಳು ಗ್ರಾಮ ಚಾವಡಿಯಲ್ಲಿ ಪರಿಶೀಲನೆ ಮೂಲಕ ಅಂತಿಮ ಪಟ್ಟಿ ರವಾನೆ
- DBT ಮುಖಾಂತರ ಹಣ ನೇರವಾಗಿ ರೈತರಿಗೆ ಲಭ್ಯ
ಪರಿಹಾರ ಸ್ಟೇಟಸ್ ಪರಿಶೀಲಿಸುವುದು ಹೇಗೆ?
- ಬೆಳೆ ಪರಿಹಾರ ಸ್ಟೇಟಸ್ ಚೆಕ್ ಮಾಡಲು ಸರಕಾರದ ಅಧಿಕೃತ ವೆಬ್ ಸೈಟ್ www.parihara.karnataka.gov.in ಗೆ ಭೇಟಿ ನೀಡಿ.
- ಆಧಾರ್ ಸಂಖ್ಯೆ ಅಥವಾ FID ಸಂಖ್ಯೆಯನ್ನು ನಮೂದಿಸಿ.
- ಸರ್ಚ್ ಎಂಬ ಆಯ್ಕೆ ಮೇಲೆ ಕ್ಲಿಕ್ ಮಾಡಿ ಅರ್ಹ ಪಟ್ಟಿ ಪರಿಹಾರ ಮತ್ತು ಸ್ಟೇಟಸ್ ಕಾಣಿಸುತ್ತದೆ.
ಕೇಂದ್ರ ಸರ್ಕಾರದ ಸಹಾಯಕ್ಕೆ ಮನವಿ
614.90 ಕೋಟಿ ರೂ. ಕೇಂದ್ರ ಪಾಲು ಪರಿಹಾರ ಹಾಗೂ 1,521.67 ಕೋಟಿ ರೂ. ಮೂಲಸೌಕರ್ಯ ಪುನರ್ನಿರ್ಮಾಣ ಅನುದಾನಕ್ಕಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿ ಮನವಿಯನ್ನು ಮಾಡಿದ್ದಾರೆ. ಕೇಂದ್ರ ತಂಡ ಶೀಘ್ರ ರಾಜ್ಯಕ್ಕೆ ಭೇಟಿ ನೀಡಲಿದ್ದು, ಶೀಘ್ರವೇ ಹೆಚ್ಚಿನ ಪರಿಹಾರದ ಹಣ ರಾಜ್ಯಕ್ಕೆ ಬರಲಿದೆ.
ಇದನ್ನೂ ಓದಿರಿ: KPCL Recruitment: ಕರ್ನಾಟಕ ಪವರ್ ಕಾರ್ಪೊರೇಷನ್ ಲಿಮಿಟೆಡ್ ನೇಮಕಾತಿ.!
ರೈತರ ಸಮಸ್ಯೆಗೆ ಪರಿಹಾರ
ತಾವು ಹಣ ಜಮಾ ಆಗಿದೆಯೇ ಎಂದು ಬ್ಯಾಂಕ್ ಪಾಸ್ಬುಕ್ ಪರಿಶೀಲನೆ ಮಾಡಿ, ಆಧಾರ್–ಬ್ಯಾಂಕ್ ಲಿಂಕ್ ಖಚಿತಪಡಿಸಿಕೊಳ್ಳಿ. ಯಾವುದೇ ಸಮಸ್ಯೆಯಿದ್ದರೆ ನಿಮ್ಮ ಹತ್ತಿರದ ಪಂಚಾಯತ್ ಅಥವಾ ತಾಲ್ಲೂಕು ಕೃಷಿ ಅಧಿಕಾರಿಗಳನ್ನು ಸಂಪರ್ಕಿಸಿ. ಹೆಲ್ಪ್ ಲೈನ್ ನಂಬರ್ 18004257474