---Advertisement---

ನಿಮ್ಮ ಫೋನ್ ಹ್ಯಾಕ್ ಆಗಿದೆ ಎಂದು ತಿಳಿಸುವ 7 ಪ್ರಮುಖ ಲಕ್ಷಣಗಳು ಮತ್ತು ನೀವು ತೆಗೆದುಕೊಳ್ಳಬೇಕಾದ ಸುರಕ್ಷತಾ ಕ್ರಮಗಳ ಮಾಹಿತಿ ಇಲ್ಲಿದೆ

On: December 9, 2025 2:49 PM
Follow Us:
ಫೋನ್ ಹ್ಯಾಕ್

Join WhatsApp

Join Now

Join Telegram

Join Now

ಇತ್ತೀಚಿನ ಡಿಜಿಟಲ್ ಯುಗದಲ್ಲಿ ಸ್ಮಾರ್ಟ್‌ಫೋನ್‌ಗಳು ನಮ್ಮ ಜೀವನದ ಅವಿಭಾಜ್ಯ ಅಂಗವಾಗಿದೆ. ಆದರೆ, ಈ ಸೌಕರ್ಯ ಹ್ಯಾಕರ್‌ಗಳಿಗೆ ಬಾಗಿಲು ತೆರೆಯುವಂತಾಗಿದೆ. ಪ್ರತಿದಿನವೂ ಬ್ಯಾಂಕಿಂಗ್ ಮಾಹಿತಿ, ಸಂದೇಶಗಳು, ಸಾಮಾಜಿಕ ಜಾಲತಾಣಗಳಲ್ಲಿ ವೈಯಕ್ತಿಕ ಮಾಹಿತಿ ಹಂಚಿಕೊಳ್ಳುವಾಗ, ಅವು ಹ್ಯಾಕರ್‌ಗಳ ಕೈಗೆ ಸೇರುವ ಭಯವೂ ಸಹ ಇದೆ. ನಿಮ್ಮ ಫೋನ್ ನ್ನು ಹ್ಯಾಕ್ ಮಾಡಲಾಗಿದೆ ಎಂದು ಹೇಗೆ ತಿಳಿಯಬಹುದು? ಇಲ್ಲಿದೆ ನಿಮ್ಮ ಫೋನ್ ಹ್ಯಾಕ್ ಆಗಿದೆಯೇ ಎಂದು ಗುರುತಿಸಲು 7 ಪ್ರಮುಖ ಲಕ್ಷಣಗಳು.

1. ಬ್ಯಾಟರಿ ಅನಿರೀಕ್ಷಿತವಾಗಿ ಶೀಘ್ರ ಖಾಲಿಯಾಗುವುದು

ನಿಮ್ಮ ಫೋನ್ ಬ್ಯಾಟರಿ ವೇಗವಾಗಿ ಕುಗ್ಗುತ್ತಿದೆಯೇ? ನೀವು ಬಳಸದೇ ಇದ್ದಾಗಲೂ ಬ್ಯಾಟರಿ ಕಡಿಮೆಯಾಗುತ್ತಿದ್ದರೆ, ಇದು ಬ್ಯಾಗ್ರೌಂಡ್ ನಲ್ಲಿ ಚಲಿಸುವ ಮಾಲ್ವೇರ್ ಅಥವಾ ಸ್ಪೈವೇರ್ ಸೂಚನೆ ಇರಬಹುದು.

2. ಫೋನ್ ಅತಿಯಾಗಿ ಬಿಸಿಯಾಗಿರುತ್ತದೆ

ನಿಮ್ಮ ಫೋನ್ ಬಳಕೆ ಇಲ್ಲದಿದ್ದರೂ ತಾಪಮಾನ ಹೆಚ್ಚಾಗಿದ್ದರೆ, ಅದು ಹ್ಯಾಕರ್‌ಗಳು ನಿಮ್ಮ ಡಿವೈಸ್‌ನ ಪ್ರೊಸೆಸರ್ ಅನ್ನು ದುರುಪಯೋಗ ಮಾಡುತ್ತಿರುವ ಸಂಕೇತವಾಗಿದೆ.

3. ಸಾಧನದ ಕಾರ್ಯಕ್ಷಮತೆ ನಿಧಾನವಾಗುವುದು

ನಿಮ್ಮ ಮೊಬೈಲ್ ಎಷ್ಟೇ ಸ್ಪೀಡಿ ಇದ್ದರೂ ಬಹಳಷ್ಟು ಸಾರಿ ನಿಧಾನವಾಗುವುದು, ಇದು ಅಪರಿಚಿತ ಆಪ್ಲಿಕೇಶನ್‌ಗಳು ಸಂಪನ್ಮೂಲಗಳನ್ನು ಹೆಚ್ಚು ಬಳಸಿ ತೊಂದರೆ ಮಾಡುತ್ತಿರುವ ಸೂಚನೆಯಾಗಿದೆ. ಇದರಿಂದ ನೀವು ಇಂತಹ ತೊಂದರೆ ಉಂಟಾದಾಗ ಎಚ್ಚರಿಕೆ ವಹಿಸುವುದು ಅವಶ್ಯ.

4. ಆಪ್ಸ್ ಅನಿರೀಕ್ಷಿತವಾಗಿ ಕ್ರ್ಯಾಶ್ ಆಗುವುದು

ನಿರಂತರವಾಗಿ ಆಪ್‌ಗಳು ತಾನೇ ಮುಚ್ಚಿಕೊಳ್ಳುತ್ತಿರುವ ಹಾಗೆ ಆಗುತ್ತಿರುವುದು, ಸ್ಪೈವೇರ್ ಅಥವಾ ಹ್ಯಾಕರ್ ನಿಂದ ಹಸ್ತಕ್ಷೇಪದ ಸೂಚನೆ. ಪದೇ ಪದೇ ಬೇರೆ ಬೇರೆ ಆಫ್ ಗಳು ಕ್ರಾಶ್ ಆಗಿ ಬಂದಾಗುತ್ತಿದ್ದರೆ ನೀವು ಎಚ್ಚೆತ್ತುಕೊಳ್ಳಬೇಕು.

5. ವಿಚಿತ್ರ ನೋಟಿಫಿಕೇಶನ್ಸ್ ಮತ್ತು ಪಾಪ್-ಅಪ್ಸ್

ನಕಲಿ ವೈರಸ್ ಅಲರ್ಟ್, ಪದೇ ಪದೆ ಅಪಾಯದ ನೋಟಿಫಿಕೇಶನ್ಸ್‌ ಮತ್ತು ಅಪರಿಚಿತ ಲಿಂಕ್‌ಗಳು ಬರುತ್ತಿದ್ದರೆ ಎಚ್ಚರಿಕೆ ಅಗತ್ಯ. ಇವು ಸಹ ನಿಮ್ಮ ಫೋನ್ ಹ್ಯಾಕ್ ಆಗಿರುವ ಸೂಚನೆಯಾಗಿರಬಹುದು.

6. ಫೋನ್ ಪರದೆ ನಿಯಂತ್ರಣ ತಪ್ಪುವುದು

ಪರದೆ ಸ್ವಯಂ ಮುಚ್ಚಿಕೊಳ್ಳುವುದು ಅಥವಾ ಆಪ್ಸ್ ಸ್ವತಃ ತೆರೆಯುತ್ತಿದೆಯೆ? ಈ ರೀತಿ ಉಂಟಾಗುತ್ತಿದ್ದರೆ ನಿಮ್ಮ ಮೊಬೈಲ್ ನ್ನು ಯಾರೋ ಹ್ಯಾಕರ್ ಗಳು ದೂರದಿಂದ ನಿಯಂತ್ರಿಸುತ್ತಿರುವ ಸೂಚನೆ ಆಗಿರಬಹುದು.

7. ಡೇಟಾ ಬಳಕೆ ಅತಿಯಾಗಿ ಹೆಚ್ಚಾಗುವುದು

ನಿಮ್ಮ ಮೊಬೈಲ್ ಡೇಟಾ ವೇಗವಾಗಿ ಮುಗಿದರೆ, ನೀವು ಹೆಚ್ಚು ಬಳಸದೆಯೂ, ಎಷ್ಟು ಡೇಟಾ ಇದ್ದರೂ ಬೇಗನೆ ಕಾಲಿಯಾಗುತ್ತಿದ್ದರೆ ಹ್ಯಾಕರ್‌ಗಳು ನಿಮ್ಮ ಖಾಸಗಿ ಮಾಹಿತಿಯನ್ನು ಬೇರೆಡೆಗೆ ರವಾನಿಸುತ್ತಿರಬಹುದು ಎಂಬ ಮುನ್ಸೂಚನೆ ಇದ್ದಂತೆ. ಇಂತಹ ಲಕ್ಷಣಗಳು ಕಂಡುಬಂದಾಗ ನೀವು ಎಚ್ಚರಿಕೆಯನ್ನು ವಹಿಸುವುದು ತುಂಬಾ ಅವಶ್ಯವಾಗಿದೆ.

ನಿಮ್ಮ ಮೊಬೈಲ್ ಸುರಕ್ಷತೆಗೆ ಇಲ್ಲಿವೆ ಪ್ರಮುಖ ಸಲಹೆಗಳು:

  • ನಿಮಗೆ ಗೊತ್ತಿಲ್ಲದ ಆಪ್‌ಗಳನ್ನು ತಕ್ಷಣ ಅನ್ ಇನ್ಸ್ಟಾಲ್ ಮಾಡಿ
  • ಕೇವಲ ಅಧಿಕೃತ ಆಪ್ ಸ್ಟೋರ್‌ಗಳಿಂದ ಅಪ್ಲಿಕೇಶನ್‌ಗಳನ್ನು ಡೌನ್‌ಲೋಡ್ ಮಾಡಿ
  • ವಿಶ್ವಾಸಾರ್ಹ ಆಂಟಿವೈರಸ್ ಉಪಯೋಗಿಸಿ ಹಾಗೂ ಸಾಫ್ಟ್‌ವೇರ್ ಅಪ್‌ಡೇಟ್‌ಗಳನ್ನು ನಿರ್ಲಕ್ಷಿಸಬೇಡಿ
  • ಅನ್ಯ ದಾಳಿ ಮತ್ತು ನಕಲಿ ಆಫರ್‌ಗಳಿಗೆ ಇಳಿಯದೆ ಜಾಗರೂಕರಾಗಿರಿ

ಉತ್ತಮ ಡಿಜಿಟಲ್ ಸ್ವಚ್ಛತೆ ಮತ್ತು ಜಾಗೃತಿ ನಿಮ್ಮ ಫೋನ್‌ ಅನ್ನು ಹ್ಯಾಕಿಂಗ್ ಹಿಡಿತದಿಂದ ರಕ್ಷಿಸುತ್ತದೆ. ಏಕೆಂದರೆ ಸಣ್ಣ ಸಂಕೇತಗಳನ್ನು ಮರೆಯಬೇಡಿ, ಅವು ದೊಡ್ಡ ಅಪಾಯಕ್ಕೆ ದಾರಿ ತೋರುತ್ತವೆ!

Mahesh Kumar M.

ನಾನು 2020 ರಿಂದ ಡಿಜಿಟಲ್ ಪತ್ರಿಕೋದ್ಯಮದಲ್ಲಿ ತೊಡಗಿಸಿಕೊಂಡಿದ್ದೆನೆ. ಸಧ್ಯ gjiet.com ಮೂಲಕ ಓದುಗರಿಗೆ ನಿಖರ, ನೈಜ ಮತ್ತು ಸವಿವರವಾದ ಮಾಹಿತಿಯನ್ನು ತಲುಪಿಸುವ ಪ್ರಯತ್ನ ಮಾಡುತ್ತಿದ್ದೇನೆ. ವಿಶೇಷವಾಗಿ ಉದ್ಯೋಗ ಮತ್ತು ಸರಕಾರಿ ಯೋಜನೆಗಳ ಕುರಿತಾಗಿ ಆಳವಾದ ಅಧ್ಯಯನವನ್ನು ಮಾಡಿದ್ದು, ಓದುಗರಿಗೆ ಉದ್ಯೋಗದ ಮತ್ತು ಸರಕಾರಿ ಯೋಜನೆಗಳ ಮಾಹಿತಿಯನ್ನು ತಲುಪಿಸುವ ಗುರಿಯನ್ನು ಇಟ್ಟುಕೊಂಡಿದ್ದೇನೆ.

Leave a Comment