---Advertisement---

PM Kusum: ರಾತ್ರಿ ಹೊತ್ತು ನೀರು ಹಾಯಿಸೋ ಕಷ್ಟ ಇಲ್ಲ , ಕರೆಂಟ್ ಬಿಲ್ ಇಲ್ಲ ! ರೈತರಿಗೆ 80% ಸಬ್ಸಿಡಿಯಲ್ಲಿ ಸೋಲಾರ್ ಪಂಪ್ – ಅರ್ಜಿ ಹಾಕೋದು ಹೇಗೆ?

On: December 15, 2025 9:43 AM
Follow Us:
pm kusum-b scheme

Join WhatsApp

Join Now

Join Telegram

Join Now

ರೈತ ಬಂಧುಗಳೇ, ದೊಡ್ಡ ಸುವರ್ಣಾವಕಾಶ! ವಿದ್ಯುತ್ ಕೊರತೆಯಿಂದಾಗಿ ರಾತ್ರಿ ನೀರು ಹಾಯಿಸೋ ತಲೆನೋವು ಶಾಶ್ವತವಾಗಿ ಮುಗಿಯಿತು! ಕರೆಂಟ್ ಬಿಲ್ ಇಲ್ಲದೇ ಉಚಿತವಾಗಿ ಬಳಸುವ ಅವಕಾಶ. ಈ ಯೋಜನೆಯಿಂದಾಗಿ ನಿಮಗೆ 80% ಸಬ್ಸಿಡಿಯ ಜೊತೆಗೆ ಸೋಲಾರ್ ಪಂಪ್‌ಸೆಟ್‌ ಉಚಿತವಾಗಿ ನಿಮಗೆ ಸಿಗ್ತಿದೆ!

ಪ್ರಧಾನ ಮಂತ್ರಿ ಕುಸುಮ್-B ಯೋಜನೆ ಅಡಿಯಲ್ಲಿ ಉಚಿತ ಸೋಲಾರ್ ಪಂಪ್ ಸೆಟ್ ವಿತರಿಸಲಾಗುತ್ತಿದ್ದು, ಈಗಲೇ ಅರ್ಜಿ ಹಾಕಿರಿ. ಡಿಸೆಂಬರ್‌ ಅಂತ್ಯಕ್ಕೆ ಯೋಜನೆ ಮುಚ್ಚುವ ಸಾಧ್ಯತೆಯಿದ್ದು, ಅವಶ್ಯವಿರುವ ರೈತಬಾಂಧವರು ಈಗಲೇ ಈ ಯೋಜನೆಯಲ್ಲಿ ಪಾಲ್ಗೊಳ್ಳಲು ಕೋರಲಾಗಿದೆ.

ಪ್ರಧಾನಮಂತ್ರಿ ಕುಸುಮ್-B ಯೋಜನೆ ಎಂದರೇನು?

ಪ್ರಧಾನ ಮಂತ್ರಿ ಕಿಸಾನ್ ಊರ್ಜಾ ಸುರಕ್ಷಾ ಏವಂ ಉತ್ತಾನ್ ಮಹಾಭಿಯಾನ್ (PM-KUSUM) ಯೋಜನೆಯಡಿ ರಾಜ್ಯ ಮತ್ತು ಕೇಂದ್ರ ಸರಕಾರಗಳ ಸಹಯೋಗದೊಂದಿಗೆ ರೈತರಿಗೆ ಸೌರಶಕ್ತಿ ಆಧಾರಿತ ಪಂಪ್‌ಸೆಟ್‌ಗಳನ್ನು 80% ಸಬ್ಸಿಡಿಯಲ್ಲಿ ನೀಡಲಾಗುತ್ತಿದೆ. ಇದರಲ್ಲಿ:

ಕೇಂದ್ರ ಸರ್ಕಾರ: 30% ಸಬ್ಸಿಡಿ
ರಾಜ್ಯ ಸರ್ಕಾರ: 50% ಸಬ್ಸಿಡಿ
ರೈತರ ಪಾಲು: ಕೇವಲ 20% (₹40,000 – ₹50,000)
ಉದಾಹರಣೆ: ಒಂದು ಸೋಲಾರ್ ಪಂಪ್ ಬೆಲೆ ₹2 ಲಕ್ಷ ಆದರೆ, ನೀವು ಕೇವಲ ₹40,000 ಮಾತ್ರ ಕಟ್ಟಿದರೆ ಸಾಕು!

ಈ ಯೋಜನೆ ನಿಮಗೆ ಹೇಗೆ ಸಹಾಯ ಮಾಡುತ್ತದೆ?

  • ರಾತ್ರಿ ಹೊತ್ತು ನೀರು ಹಾಯಿಸುವ ಕಷ್ಟ ತಪ್ಪುತ್ತದೆ!
  • ಕರೆಂಟ್ ಬಿಲ್ ಶೂನ್ಯ! ಸೌರಶಕ್ತಿಯಿಂದ ಉಚಿತ ವಿದ್ಯುತ್!
  • 80% ಸಬ್ಸಿಡಿ! ಕೇವಲ 20% ಹಣ ನಿಮ್ಮ ಪಾಲು!
  • 7.5 HP ವರೆಗಿನ ಸೋಲಾರ್ ಪಂಪ್ ಸಿಗುತ್ತದೆ.
  • ಗ್ರಿಡ್ ಸಂಪರ್ಕವಿಲ್ಲದ ಪ್ರದೇಶಗಳಲ್ಲಿಯೂ ಪಂಪ್ ಸೆಟ್ ಬಳಕೆ ಸಾಧ್ಯ.

ಅರ್ಜಿ ಸಲ್ಲಿಸಲು ಬೇಕಾದ ದಾಖಲೆಗಳು

  • ಆಧಾರ್ ಕಾರ್ಡ್ (ಮೊಬೈಲ್ ನಂಬರ್ ಲಿಂಕ್ ಆಗಿರಬೇಕು)
  • ಇತ್ತೀಚಿನ ಪಹಣಿ (RTC)
  • ಬ್ಯಾಂಕ್ ಪಾಸ್‌ಬುಕ್
  • ಪಾಸ್‌ಪೋರ್ಟ್ ಅಳತೆಯ ಫೋಟೋ
  • ಸ್ವಯಂ ಘೋಷಣೆ ಪತ್ರ (Self Declaration)

ಯಾವ ಕಂಪನಿಯನ್ನು ಆಯ್ಕೆ ಮಾಡಬೇಕು? (ಅತಿ ಮುಖ್ಯ!)

ಪೋರ್ಟಲ್‌ನಲ್ಲಿ Vendor Selection ಬಂದಾಗ ಈ ಕಂಪನಿಗಳಲ್ಲಿ ಒಂದನ್ನು ಆರಿಸಿ:

  • Tata Power Solar – ಅತ್ಯುತ್ತಮ ಸರ್ವಿಸ್, 25 ವರ್ಷ ಗ್ಯಾರಂಟಿ
  • Shakti Pumps – ಅತಿ ವೇಗದ ಅಳವಡಿಕೆ, ರೈತರ ನಂ.1 ಆಯ್ಕೆ
  • CRI Pumps – ಸ್ಥಳೀಯ ಸರ್ವಿಸ್ ಸೆಂಟರ್ ಜಾಲ
  • Rotomag, Premier Energies ಕೂಡ ಲಭ್ಯ (ಜಿಲ್ಲೆಯಲ್ಲಿ ಲಿಸ್ಟ್ ಚೆಕ್ ಮಾಡಿ)

ನಿಮ್ಮ ಊರಿನಲ್ಲಿ ಯಾರ ಸರ್ವಿಸ್ ಚೆನ್ನಾಗಿದೆಯೋ ಅವರನ್ನೇ ಆರಿಸಿ – ನಂತರ ಬದಲಾಯಿಸಲು ಆಗಲ್ಲ!

ಮನೆಯಲ್ಲೇ ಕುಳಿತು 10 ನಿಮಿಷದಲ್ಲಿ ಅರ್ಜಿ ಸಲ್ಲಿಕೆ (Step-by-Step)

  • ಅಧಿಕೃತ ವೆಬ್‌ಸೈಟ್‌ಗೆ ಹೋಗಿ: → souramitra.com
  • ಮೊಬೈಲ್ + ಆಧಾರ್ OTP ದ್ವಾರಾ ರಿಜಿಸ್ಟರ್ ಆಗಿ
  • RTC, ಆಧಾರ್, ಫೋಟೋ, ಬ್ಯಾಂಕ್ ಪಾಸ್‌ಬುಕ್ ಅಪ್‌ಲೋಡ್ ಮಾಡಿ
  • Vendor ಆಯ್ಕೆ ಮಾಡಿ (Tata/Shakti/CRI)
  • 20% ಹಣ ಆನ್‌ಲೈನ್‌ನಲ್ಲೇ ಕಟ್ಟಿ
  • 90 ದಿನದೊಳಗೆ ಪಂಪ್ ನಿಮ್ಮ ಜಮೀನಿಗೆ ಫ್ರೀ ಅಳವಡಿಕೆ!

ಸಹಾಯವಾಣಿ (ತಕ್ಷಣ ಕರೆ ಮಾಡಿ)

KREDL ಹೆಲ್ಪ್‌ಲೈನ್: 080-22202100 / 8095132100
CESC ಹೆಲ್ಪ್‌ಲೈನ್: 9449598669

ಅಂತಿಮ ಸಲಹೆಗಳು

  • ಯಾವುದೇ ಮಧ್ಯವರ್ತಿಗಳಿಗೆ ಹಣ ಕೊಡಬೇಡಿ!
  • OTP ಯಾರಿಗೂ ಶೇರ್ ಮಾಡಬೇಡಿ!
  • ಅಧಿಕೃತ ವೆಬ್‌ಸೈಟ್‌ನಿಂದ ಮಾತ್ರ ಅರ್ಜಿ ಸಲ್ಲಿಸಿ!
  • ಹಣ ಪಾವತಿ ಆನ್‌ಲೈನ್ ಮೂಲಕವೇ ಮಾಡಿ!

ರೈತರೇ, ಈ ಅವಕಾಶವನ್ನು ಕಳೆದುಕೊಳ್ಳಬೇಡಿ! ಸೋಲಾರ್ ಪಂಪ್ ಪಡೆದು ಕರೆಂಟ್ ಬಿಲ್ ಉಳಿಸಿ, ಹಗಲಿನಲ್ಲಿ ಸುಲಭವಾಗಿ ನೀರು ಹಾಯಿಸಿ!

ಈ ಮಾಹಿತಿ ಉಪಯುಕ್ತವೆನಿಸಿದರೆ ಶೇರ್ ಮಾಡಿ!

Mahesh Kumar M.

ನಾನು 2020 ರಿಂದ ಡಿಜಿಟಲ್ ಪತ್ರಿಕೋದ್ಯಮದಲ್ಲಿ ತೊಡಗಿಸಿಕೊಂಡಿದ್ದೆನೆ. ಸಧ್ಯ gjiet.com ಮೂಲಕ ಓದುಗರಿಗೆ ನಿಖರ, ನೈಜ ಮತ್ತು ಸವಿವರವಾದ ಮಾಹಿತಿಯನ್ನು ತಲುಪಿಸುವ ಪ್ರಯತ್ನ ಮಾಡುತ್ತಿದ್ದೇನೆ. ವಿಶೇಷವಾಗಿ ಉದ್ಯೋಗ ಮತ್ತು ಸರಕಾರಿ ಯೋಜನೆಗಳ ಕುರಿತಾಗಿ ಆಳವಾದ ಅಧ್ಯಯನವನ್ನು ಮಾಡಿದ್ದು, ಓದುಗರಿಗೆ ಉದ್ಯೋಗದ ಮತ್ತು ಸರಕಾರಿ ಯೋಜನೆಗಳ ಮಾಹಿತಿಯನ್ನು ತಲುಪಿಸುವ ಗುರಿಯನ್ನು ಇಟ್ಟುಕೊಂಡಿದ್ದೇನೆ.

Latest Post

1 thought on “PM Kusum: ರಾತ್ರಿ ಹೊತ್ತು ನೀರು ಹಾಯಿಸೋ ಕಷ್ಟ ಇಲ್ಲ , ಕರೆಂಟ್ ಬಿಲ್ ಇಲ್ಲ ! ರೈತರಿಗೆ 80% ಸಬ್ಸಿಡಿಯಲ್ಲಿ ಸೋಲಾರ್ ಪಂಪ್ – ಅರ್ಜಿ ಹಾಕೋದು ಹೇಗೆ?”

Leave a Comment