ಅನ್ನಭಾಗ್ಯ ಯೋಜನೆ (Anna Bhagya) ಅಡಿ ಉಚಿತ ಅಕ್ಕಿ ಪಡೆಯುತ್ತಿರುವವರಿಗೆ ಆಹಾರ ಇಲಾಖೆಯಿಂದ ಬಿಗ್ ಶಾಕ್! ಅಕ್ರಮವಾಗಿ ಬಡವರ ಅನ್ನದ ಹಕ್ಕು ಕಸಿದುಕೊಳ್ಳುತ್ತಿರುವವರಿಗೆ ಶಿಕ್ಷಿಸಲು ಸರಕಾರ ‘ಆಕ್ಷನ್ ಮೋಡ್’ಗೆ ಇಳಿದಿದೆ. ಧಾರವಾಡ ಜಿಲ್ಲೆಯಲ್ಲಿ ಒಂದೇ ಸಲ 3,514 ಕಾರ್ಡ್ಗಳನ್ನು ರದ್ದು ಮಾಡಲಾಗಿದೆ. ನಿಮ್ಮ ಕಾರ್ಡ್ ಕೂಡ ಈ ಲಿಸ್ಟ್ನಲ್ಲಿದೆಯಾ? ಇಲ್ಲಿದೆ ಫುಲ್ ಡೀಟೇಲ್ಸ್.
ಧಾರವಾಡ ಜಿಲ್ಲೆಯಲ್ಲಿ ಎಷ್ಟು ಕಾರ್ಡ್ ರದ್ದು? (ತಾಲೂಕುವಾರು ಲಿಸ್ಟ್)
ಜಿಲ್ಲೆಯಲ್ಲಿ ಒಟ್ಟು 3.86 ಲಕ್ಷ ಪಡಿತರ ಚೀಟಿಗಳಿದ್ದು, ಅನರ್ಹರನ್ನು ಹುಡುಕಿ ಹುಡುಕಿ 3,514 ಕಾರ್ಡ್ಗಳನ್ನು ಎಪಿಎಲ್ (APL)ಗೆ ವರ್ಗಾಯಿಸಲಾಗಿದೆ. ನೀವು ಈ ಕೆಳಗಿನ ಏರಿಯಾದಲ್ಲಿದ್ದರೆ ಒಮ್ಮೆ ಚೆಕ್ ಮಾಡಿ:
| ತಾಲ್ಲೂಕು (Taluk) | ರದ್ದಾದ ಕಾರ್ಡ್ಗಳು |
|---|---|
| ಹುಬ್ಬಳ್ಳಿ (Hubli) | 1,404 |
| ಧಾರವಾಡ (Dharwad) | 1,171 |
| ಕುಂದಗೋಳ (Kundgol) | 319 |
| ಕಲಘಟಗಿ (Kalghatgi) | 243 |
| ನವಲಗುಂದ (Navalgund) | 188 |
| ಅಳ್ನಾವರ (Alnavar) | 141 |
| ಅಣ್ಣಿಗೇರಿ (Annigeri) | 48 |
| ಒಟ್ಟು (Total) | 3,514 |
ಯಾರ ಕಾರ್ಡ್ ರದ್ದಾಗುತ್ತೆ? (ಸಿಂಪಲ್ ರೂಲ್ಸ್)
ನೀವು ಈ ಕೆಳಗಿನ 5 ರೂಲ್ಸ್ ಫಾಲೋ ಮಾಡದಿದ್ದರೆ ನಿಮ್ಮ ಕಾರ್ಡ್ ಗ್ಯಾರಂಟಿ ರದ್ದು!
- ವಾರ್ಷಿಕ ಆದಾಯ ₹1.20 ಲಕ್ಷ ಮೀರಿದ್ರೆ.
- 7.5 ಎಕ್ರೆಗಿಂತ ಹೆಚ್ಚು ಜಮೀನು ಇದ್ರೆ.
- Income Tax (IT) ಕಟ್ಟುವವರು ಅಥವಾ ಸರ್ಕಾರಿ ನೌಕರರು.
- ವಾರ್ಷಿಕ ₹25 ಲಕ್ಷ ಟರ್ನ್ ಓವರ್ ಇರುವ ಬಿಸಿನೆಸ್ ಮ್ಯಾನ್ಗಳು.
- ಕಳೆದ 6 ತಿಂಗಳಿಂದ ಪಡಿತರ (ಅಕ್ಕಿ) ಪಡೆಯದವರು.
ಇದನ್ನೂ ಓದಿರಿ: ‘ಗೃಹಲಕ್ಷ್ಮಿ’ ಹಣ: ಮುಂದಿನ ವಾರ ಈ ಜಿಲ್ಲೆಗಳ ಮಹಿಳೆಯರ ಖಾತೆಗೆ ಸೇರಲಿದೆ 24ನೇ ಕಂತು! ಲಿಸ್ಟ್ ನೋಡಿ
ಅರ್ಹರಿದ್ದರೂ ಕಾರ್ಡ್ ರದ್ದಾಗಿದ್ರೆ ಏನು ಮಾಡೋದು?
ಗಾಬರಿ ಆಗಬೇಡಿ! ನೀವು ನಿಜವಾದ ಬಡವರಾಗಿದ್ದು, ತಪ್ಪಾಗಿ ಕಾರ್ಡ್ ರದ್ದಾಗಿದ್ದರೆ ಇಂದೇ ಈ ಕೆಲಸ ಮಾಡಿ:
ಎಲ್ಲಿಗೆ ಹೋಗಬೇಕು? ಹತ್ತಿರದ ಆಹಾರ ಇಲಾಖೆ ಕಚೇರಿ ಅಥವಾ ತಾಲೂಕು ಕಚೇರಿ.
ಯಾವ ಡಾಕ್ಯುಮೆಂಟ್ ಬೇಕು?
- ಆಧಾರ್ ಕಾರ್ಡ್
- ಬ್ಯಾಂಕ್ ಪಾಸ್ಬುಕ್
- ಆದಾಯ & ಜಾತಿ ಪ್ರಮಾಣ ಪತ್ರ
- ಕುಟುಂಬದ ಸದಸ್ಯರ ಆದಾಯ ಪ್ರಮಾಣಪತ್ರ.
ನಮ್ಮ ಸ್ಪೆಷಲ್ ಸಲಹೆ: e-KYC ಚೆಕ್ ಮಾಡಿದ್ರಾ?
ತುಂಬಾ ಜನ ಆಧಾರ್ ಲಿಂಕ್ (Link Aadhaar) ಮಾಡಿದ್ರೂ e-KYC ಮಾಡಿಸಿಲ್ಲ! ಇದರಿಂದಲೂ ಕಾರ್ಡ್ ರದ್ದಾಗುತ್ತೆ.
ತಕ್ಷಣ ನಿಮ್ಮ ಹತ್ತಿರದ ನ್ಯಾಯಬೆಲೆ ಅಂಗಡಿಗೆ (Fair Price Shop) ಹೋಗಿ, “ನಿಮ್ಮ ಮನೆಯ ಎಲ್ಲರ e-KYC ಆಗಿದ್ಯಾ?” ಅಂತ ಚೆಕ್ ಮಾಡಿಸಿ. ಇಲ್ಲದಿದ್ರೆ ಅಲ್ಲೇ ಮಾಡಿಸಿ ಬನ್ನಿ.
ಪದೇ ಪದೆ ಕೇಳಲಾಗುವ ಪ್ರಶ್ನೆಗಳು
6 ತಿಂಗಳು ಅಕ್ಕಿ ಪಡೆದಿಲ್ಲ ಅಂದ್ರೆ ಏನಾಗುತ್ತೆ?
ಸತತ 6 ತಿಂಗಳು ಪಡಿತರ ಪಡೆಯದಿದ್ರೆ “ಅನರ್ಹ” ಅಂತ ಪರಿಗಣಿಸಿ ಕಾರ್ಡ್ ರದ್ದು ಮಾಡ್ತಾರೆ.
BPL ಕಾರ್ಡ್ ರದ್ದಾದ್ರೆ ಅನ್ನಭಾಗ್ಯ ಅಕ್ಕಿ ನಿಲ್ಲುತ್ತಾ?
ಹೌದು, BPL ನಿಂದ APL ಆದ್ರೆ ಉಚಿತ ಅಕ್ಕಿ ನಿಲ್ಲುತ್ತೆ.