ಹೊಸ ಸ್ಕೂಟರ್ ತಗೋಬೇಕು ಅಂತ ಯೋಚಿಸ್ತಾ ಇದ್ದೀರಾ ? ಪೆಟ್ರೋಲ್ ಸ್ಕೂಟರ್ ಬೆಸ್ಟಾ ಇಲ್ಲಾ ಎಲೆಕ್ಟ್ರಿಕ್ ಸ್ಕೂಟರ್ ಲಾಭ ಜಾಸ್ತೀನಾ ಅನ್ನೋ ಗೊಂದಲ ಕಾಡತಾ ಇದೆಯಾ? ನವೆಂಬರ್ 2025 ರ ಸ್ಕೂಟರ್ ಮಾರಾಟದ ಹೊಸ ರಿಪೋರ್ಟ್ ಬಂದಿದೇ. ಈ ಡೇಟಾ ನೋಡಿದರೆ ಜನ ಯಾವ ಸ್ಕೂಟರ್ ಕಡೆ ಮುಗಿಬಿದ್ದು ಖರೀದಿ ಮಾಡ್ತಾರೆ ಅನ್ನೋದು ಕ್ಲಿಯರ್ ಆಗುತ್ತೆ. ಇದನ್ನ ತಿಳಿಯಲು ಕೊನೆಯವರೆಗೆ ಓದಿರಿ.
ಹೋಂಡಾ ಆಕ್ಟಿವಾ ಮತ್ತೆ ನಂಬರ್ ಒನ್
ಭಾರತೀಯರ ಫೇವರಿಟ್ ಹೋಂಡಾ ಆಕ್ಟಿವಾ ಮತ್ತೆ ತನ್ನ ದರ್ಬಾರ್ ಶುರು ಮಾಡಿದೆ. ನವೆಂಬರ್ 2025 ರಲ್ಲಿ ಅಂದಾಜು 2,62,689 ಹೋಂಡಾ ಆಕ್ಟಿವಾ ಸ್ಕೂಟರ್ ಗಳು ಮಾರಾಟವಾಗಿವೆ.
ಆಕ್ಟಿವಾ ಪ್ರಮುಖ ಹೈಲೈಟ್ಸ್
- ಆರಂಭಿಕ ಬೆಲೆ ಸುಮಾರು 76 ಸಾವಿರ ರೂ ಎಕ್ಸ್ ಶೋರೂಮ್
- ಮಾರುಕಟ್ಟೆಲ್ಲ ಒಟ್ಟು ಸ್ಕೂಟರ್ ಸೇಲ್ ನಲ್ಲೇ ಸುಮಾರು 40 ರಷ್ಟು ಶೇಕಡಾ ಪಾಲು ಒಂದು ಆಕ್ಟಿವಾ ಮಾಡೆಲ್ ಗೇ
- ಲಾಂಗ್ ಟರ್ಮ್ ಬಾಳಿಕೆ, ವಿಶ್ವಾಸಾರ್ಹತೆ, ರಿಸೇಲ್ ವ್ಯಾಲ್ಯೂ ಇದರಿಂದಾಗಿ ಮಾಧ್ಯಮ ವರ್ಗದ ಫ್ಯಾಮಿಲಿಗಳ ಫಸ್ಟ್ ಚಾಯ್ಸ್ ಆಗ್ತಾ ಇದೆ
ಟಿವಿಎಸ ಜುಪಿಟರ್ ಮತ್ತು ಸುಜುಕಿ ಆಕ್ಸೆಸ್ ಸ್ಟೋರಿ
ಹೋಂಡಾ ಆಕ್ಟಿವಾ ನಂತರ ಫ್ಯಾಮಿಲಿ ಸ್ಕೂಟರ್ ಅಂತ ಹೆಸರು ತಂದಿರುವ ಟಿವಿಎಸ ಜುಪಿಟರ್ ಎರಡನೇ ಸ್ಥಾನಕ್ಕೆ ಬಂದು ಕುಳಿತಿದೆ. ನವೆಂಬರ್ ನಲ್ಲಿ ಜುಪಿಟರ್ ಸೇಲ್ ಅಂದಾಜು 1,24,782 ಯೂನಿಟ್ ಗಳು.
ಮೂರನೇ ಸ್ಥಾನದಲ್ಲಿ ಸುಜುಕಿ ಆಕ್ಸೆಸ್ 125. ಸುಮಾರು 67,477 ಯೂನಿಟ್ ಮಾರಾಟವಾಗಿದೆ. ಪವರ್ ಜೊತೆಗೆ ಮೈಲೇಜ್ ಬೇಕು ಅನ್ನೋವರಿಗೆ ಆಕ್ಸೆಸ್ ಉತ್ತಮ ಚಾಯ್ಸ್ ಆಗ್ತಾ ಇರುವುದು ಸ್ಪಷ್ಟವಾಗುತ್ತಿದೆ.
ಎಲೆಕ್ಟ್ರಿಕ್ ಸ್ಕೂಟರ್ ಗಳ ಹಾವಳಿ
ಪೆಟ್ರೋಲ್ ಸ್ಕೂಟರ್ ಜೊತೆಗೆ ಈಗಾ ಎಲೆಕ್ಟ್ರಿಕ್ ಸ್ಕೂಟರ್ ಸೆಗ್ಮೆಂಟ್ ಕೂಡ ಜೋರಾಗಿ ಪೈಪೋಟಿ ಕೊಡ್ತಿದೆ. ವಿಶೇಷವಾಗಿ ಟಿವಿಎಸ್ ಮತ್ತು ಬಜಾಜ್ ಕಂಪನಿಗಳು ಇವಿಯಲ್ಲಿ ಸ್ಟ್ರಾಂಗ್ ಆಗಿ ತೋರುತ್ತಿವೆ.
ಟಿವಿಎಸ್ ಐಕ್ಯೂಬ್
- ಸುಮಾರು 38,191 ಯೂನಿಟ್ ಮಾರಾಟ
- ಟಾಪ್ 10 ಲಿಸ್ಟ್ ನಲ್ಲಿ ನಾಲ್ಕನೇ ಸ್ಥಾನ
- ಮಾರಾಟದಲ್ಲಿ ಅಂದಾಜು 49 ಶೇಕಡಾ ಗ್ರೋತ್ ಇಯರ್ ಆನ್ ಇಯರ್
ಬಜಾಜ್ ಚೇತಕ್
- ಅಂದಾಜು 38,022 ಯೂನಿಟ್ ಮಾರಾಟ
- ಐದನೇ ಸ್ಥಾನ
- ಕಳೆದ ವರ್ಷಕ್ಕೆ ಹೋಲಿಸಿದ್ರೆ ಸುಮಾರು 47 ಶೇಕಡಾ ಏರಿಕೆ
- ಸಿಟಿ ಯೂಸ್ ಗೆ ಕ್ಲಾಸಿಕ್ ಲುಕ್ ಜೊತೆಗೆ ಮೋಡರ್ನ್ ಎಲೆಕ್ಟ್ರಿಕ್ ಫೀಲ್ ಬೇಡವ್ರಿಗೆ ಸೂಟ್ ಆಗ್ತಿದೆ
ಹೀರೋ ಡೆಸ್ಟಿನಿ 125 ಕೊಟ್ಟ ಬಿಗ್ ಸರ್ಪ್ರೈಸ್
ಈ ಬಾರಿ ಅಚ್ಚರಿ ಕೊಟ್ಟ ಬ್ರ್ಯಾಂಡ್ ಹೀರೋ. ಹೀರೋ ಡೆಸ್ಟಿನಿ 125 ಸ್ಕೂಟರ್ ನ ಮಾರಾಟ ನವೆಂಬರ್ ನಲ್ಲಿ ಅಂದಾಜು 27,036 ಯೂನಿಟ್ ಗಳು. ಇದರಲ್ಲೇ ಶಾಕ್ ಏನೆಂದರೆ ಕಳೆದ ವರ್ಷಕ್ಕೆ ಹೋಲಿಸಿದ್ರೆ ಸುಮಾರು 205 ಶೇಕಡಾ ಮಾರಾಟದಲ್ಲಿ ಜಂಪ್ ಕಂಡಿದೆ. ಇದರಿಂದ ಹೀರೋ ಕಂಪನಿ ಸ್ಕೂಟರ್ ಮಾರುಕಟ್ಟೆಯಲ್ಲಿ ಮತ್ತೆ ಸ್ಟ್ರಾಂಗ್ ಕಂ ಬ್ಯಾಕ್ ಮಾಡ್ತಾ ಇದೆ ಅನ್ನೋದು ಕ್ಲಿಯರ್.
ನವೆಂಬರ್ 2025 ಟಾಪ್ 10 ಸ್ಕೂಟರ್ ಗಳ ಸಂಪೂರ್ಣ ಲಿಸ್ಟ್
ಮೊದಲ ಸ್ಥಾನದಲ್ಲಿ ಹೋಂಡಾ ಆಕ್ಟಿವಾ
ಸುಮಾರು 2,62,689 ಯೂನಿಟ್
ಇಯರ್ ಆನ್ ಇಯರ್ ಗ್ರೋತ್ ಅಂದಾಜು 27 ಶೇಕಡಾ
ಎರಡನೇ ಸ್ಥಾನ ಟಿವಿಎಸ್ ಜುಪಿಟರ್
ಸುಮಾರು 1,24,782 ಯೂನಿಟ್
ಸುಮಾರು 25 ಶೇ ಗ್ರೋತ್
ಮೂರನೇ ಸ್ಥಾನ ಸುಜುಕಿ ಆಕ್ಸೆಸ್ 125
ಸುಮಾರು 67,477 ಯೂನಿಟ್
ಬೆಳವಣಿಗೆ ಸುಮಾರು 24 ದಶಮಾಂಶ 7 ಶೇಕಡಾ
ನಾಲ್ಕನೇ ಸ್ಥಾನ ಟಿವಿಎಸ್ ಐಕ್ಯೂಬ್ ಎಲೆಕ್ಟ್ರಿಕ್
38,191 ಯೂನಿಟ್
ಸುಮಾರು 49 ಶೇಕಡಾ ಏರಿಕೆ
ಐದನೇ ಸ್ಥಾನ ಬಜಾಜ್ ಚೇತಕ್ ಎಲೆಕ್ಟ್ರಿಕ್
38,022 ಯೂನಿಟ್
ಸುಮಾರು 47 ಶೇಕಡಾ ಗ್ರೋತ್
ಆರನೇ ಸ್ಥಾನ ಟಿವಿಎಸ್ ಎನ್ ಟಾರ್ಕ್
30,589 ಯೂನಿಟ್
ಸುಮಾರು 15 ಶೇಕಡಾ ಏರಿಕೆ
ಏಳನೇ ಸ್ಥಾನ ಹೀರೋ ಡೆಸ್ಟಿನಿ 125
27,036 ಯೂನಿಟ್
ಅಂದಾಜು 205 ಶೇಕಡಾ ಗ್ರೋತ್ ಇದು ದೊಡ್ಡ ದಾಖಲೆ
ಎಂಟನೇ ಸ್ಥಾನ ಸುಜುಕಿ ಬರ್ಗ್ ಮ್ಯಾನ್
23,656 ಯೂನಿಟ್
ಸುಮಾರು 36 ಶೇಕಡಾ ಏರಿಕೆ
ಒಂಬತ್ತನೇ ಸ್ಥಾನ ಯಮಹಾ ರೇಝೆಡ್ ಆರ್
21,049 ಯೂನಿಟ್
ಸುಮಾರು 46 ಶೇಕಡಾ ಬೆಳವಣಿಗೆ
ಲೈಟ್ ವೇಟ್, ಸ್ಮಾರ್ಟ್ ಲುಕ್ ಬೇಕು ಅನ್ನೋ ಯೂತ್ ಗಿಟ್ಟಿಕೊಳ್ಳ್ತಿರೋ ಸ್ಕೂಟರ್
ಹತ್ತನೇ ಸ್ಥಾನ ಏಥರ್ ರಿಜ್ಟಾ ಎಲೆಕ್ಟ್ರಿಕ್
18,500 ಯೂನಿಟ್
ಸುಮಾರು 79 ಶೇಕಡಾ ಗ್ರೋತ್
ಕಂಫರ್ಟ್ ಮತ್ತು ರೇಂಜ್ ಬ್ಯಾಲೆನ್ಸ್ ಮಾಡ್ಕೊಂಡ ಎಲೆಕ್ಟ್ರಿಕ್ ಫ್ಯಾಮಿಲಿ ಸ್ಕೂಟರ್ ಆಗಿ ಪಾಪ್ಯುಲರ್ ಆಗ್ತಿದೆ