ಜನನ ಪ್ರಮಾಣ ಪತ್ರ (Birth Certificate) ಎಂದರೆ — ಒಂದು ಮಗುವಿನ ಜನ್ಮ ದಿನಾಂಕ, ಸ್ಥಳ ಮತ್ತು ತಂದೆ ತಾಯಿ ವಿವರಗಳ ಅಧಿಕೃತ ದಾಖಲೆ. ಇದು ಯಾವುದೇ ಸರ್ಕಾರದ ಯೋಜನೆ, ಶಾಲಾ ಪ್ರವೇಶ, ಪಾಸ್‌ಪೋರ್ಟ್, ಪಾನ್ ಕಾರ್ಡ್, ಮತದಾರ ಚೀಟಿ ಸಿಗಲು ಅತ್ಯಾವಶ್ಯಕ. ಆದರೆ ಕೆಲವೊಮ್ಮೆ ಜನನ ಪ್ರಮಾಣ ಪತ್ರದಲ್ಲಿ ತಪ್ಪುಗಳು ಬರುವುದರಿಂದ ಸಮಸ್ಯೆಗಳು ಉಂಟಾಗುತ್ತವೆ. ಇನ್ನು, ಈ ಪ್ರಮಾಣಪತ್ರವನ್ನು ಹೇಗೆ ಆದಷ್ಟು ತ್ವರಿತವಾಗಿ ಪಡೆಯುವುದು? ತಪ್ಪಿದ್ದಲ್ಲಿ ತಿದ್ದುಪಡಿಪಡಿಸುವುದು ಹೇಗೆ? ಅಂತ ಎಲ್ಲಾ ಮಾಹಿತಿಗಳನ್ನು ತಿಳಿಯೋಣ.
ಜನನ ಪ್ರಮಾಣ ಪತ್ರ ಎಂದರೇನು?
ಜನನ ಪ್ರಮಾಣ ಪತ್ರವು 1969 ರ ನಾಗರಿಕ ನೋಂದಣಿ ಕಾಯ್ದೆಯ ಅಡಿಯಲ್ಲಿ ಹೊರಡಿಸಲಾಗುತ್ತದೆ. ಇದು ಮಗುವಿನ ಜನನದ ಧೃಢೀಕರಣವಾದ ಕಾನೂನು ದಾಖಲೆ. ಗ್ರಾಮ ಪಂಚಾಯಿತಿ, ನಗರಪಾಲಿಕೆ, ಆರೋಗ್ಯ ಇಲಾಖೆ ಕಚೇರಿಗಳಿಂದ ಈ ಪ್ರಮಾಣ ಪತ್ರ ಪಡೆಯಬಹುದು.
ಯಾವ ಕಾರಣಕ್ಕೆ ಜನನ ಪ್ರಮಾಣ (Birth Certificate) ಪತ್ರ ಪಡೆಯುವುದು ಅವಶ್ಯಕ?
- ಶಾಲೆ, ಕಾಲೇಜು ಪ್ರವೇಶಕ್ಕಾಗಿ
- ಪಾಸ್‌ಪೋರ್ಟ್, ಪಾನ್ ಕಾರ್ಡ್, ಆಧಾರ್ ಪಡೆಯಲು
- ಮತದಾರರ ಪಟ್ಟಿಗೆ ಸೇರಲು
- ಸರ್ಕಾರಿ ಅಥವಾ ಖಾಸಗಿ ಉದ್ಯೋಗ ಅರ್ಜಿ ಹಾಕಲು
- ವಯಸ್ಸಿನ ಸ್ಪಷ್ಟೀಕರಣಕ್ಕೆ
- ಮಕ್ಕಳ ವಾರಸಾ ಹಾಗೂ ಹಕ್ಕು ದಾಖಲೆಗೆ
ಇದನ್ನೂ ಓದಿರಿ: BMRCL Recruitment: ಸಹಾಯಕ ಎಂಜಿನಿಯರ್ ಹುದ್ದೆಗಳಿಗೆ ಅರ್ಜಿ ಆಹ್ವಾನ
ಜನನ ಪ್ರಮಾಣ ಪತ್ರ ಪಡೆಯುವ ವಿಧಾನಗಳಾವುವು?
1. ಆಫ್‌ಲೈನ್ ವಿಧಾನ:
- ಮಗುವಿನ ಜನನದ ಸ್ಥಳದ ಆರೋಗ್ಯ ಕೇಂದ್ರ ಅಥವಾ ಆಸ್ಪತ್ರೆಯಿಂದ ಪ್ರಾರಂಭಿಕ Birth Intimation Form ಪಡೆಯಿರಿ.
- ಅದನ್ನು ಗ್ರಾಮ ಪಂಚಾಯಿತಿ ಅಥವಾ ನಗರಪಾಲಿಕೆ ಕಚೇರಿಗೆ ಸಲ್ಲಿಸಿ.
- ಅಗತ್ಯ ದಾಖಲೆಗಳು: ಆಸ್ಪತ್ರೆಯ Birth Intimation Form, ಪೋಷಕರ ಆಧಾರ್ ನಕಲು, (ಪೋಷಕರ ವಿವಾಹ ಪ್ರಮಾಣ ಪತ್ರ).
- ಶುಲ್ಕ: ರೂ.20 – ರೂ.50.
- ಪ್ರಕ್ರಿಯೆ ದಿನಗಳು: 7-15 ದಿನಗಳಲ್ಲಿ ಸಿಗುತ್ತದೆ.
2. ಆನ್‌ಲೈನ್ ವಿಧಾನ:
- Seva Sindhu ಅಥವಾ CRS India ಪೋರ್ಟಲ್ಗೆ ಭೇಟಿ ನೀಡಿ.
- “Birth Certificate Apply” ಆಯ್ಕೆ ಮಾಡಿ, ಪೋಷಕರ ಹಾಗೂ ಮಗುವಿನ ವಿವರ ನಮೂದಿಸಿ.
- ಅಗತ್ಯ ದಾಖಲೆಗಳನ್ನು ಅಪ್‌ಲೋಡ್ ಮಾಡಿ, ಶುಲ್ಕ ಪಾವತಿಸಿ ಅರ್ಜಿ ಸಲ್ಲಿಸಿ.
- ಪರಿಶೀಲನೆ ನಂತರ ಪ್ರಮಾಣ ಪತ್ರ ಡೌನ್‌ಲೋಡ್ ಮಾಡಬಹುದು.
ಜನನ ಪ್ರಮಾಣ ಪತ್ರದಲ್ಲಿ ತಪ್ಪುಗಳಿದ್ದರೆ ತಿದ್ದುಪಡಿ ಹೇಗೆ ಮಾಡಿಸಬೇಕು?
- ನೋಟರಿ ಪತ್ರ ತಯಾರಿಸಿ: ತಪ್ಪಾದ ವಿವರ (ಹೆಸರು, ದಿನಾಂಕ, ಪೋಷಕರ ಹೆಸರು) ವಿವರಿಸಿ.
- ದಾಖಲೆಗಳು: ಮೂಲ Birth Certificate ನಕಲು, ಪೋಷಕರ ಆಧಾರ್, ಶಾಲಾ ದಾಖಲೆ (ಅಗತ್ಯ ಇದ್ದರೆ), ನೋಟರಿ ಪತ್ರ.
- ಕಚೇರಿ ಭೇಟಿ: ಎಲ್ಲಾ ದಾಖಲೆಗಳೊಂದಿಗೆ ಸ್ಥಳೀಯ ಜನನ ನೋಂದಣಿ ಕಚೇರಿಗೆ ಅರ್ಜಿ ಸಲ್ಲಿಸಿ.
- ತಿದ್ದುಪಡಿ ಸಮಯ: ಸಾಮಾನ್ಯವಾಗಿ 10-15 ದಿನದಲ್ಲಿ ಪ್ರಾಮಾಣಿಕ ತಿದ್ದುಪಡಿ ಪ್ರಮಾಣ ಪತ್ರ ಸಿಗುತ್ತದೆ.
ಸೂಚನೆ: ಮಗು ಹುಟ್ಟಿದ ನಂತರ 4 ವರ್ಷಗಳ ಒಳಗೆ ತಪ್ಪು ತಿದ್ದಿಸಿಕೊಳ್ಳುವುದು ಉತ್ತಮ. ಹೆಚ್ಚು ತಡವಾದರೆ ಕೋರ್ಟ್ ಆದೇಶದ ಸಹಾಯ ಬೇಕಾಗಬಹುದು.
ಇದನ್ನೂ ಓದಿರಿ: Marriage Certificate: ಮನೆಯಿಂದಲೇ ‘ವಿವಾಹ ನೋಂದಣಿ’ಗೆ ಅರ್ಜಿ ಹಾಕಿ, 4 ದಿನದಲ್ಲಿ ಸರ್ಟಿಫಿಕೇಟ್ ಪಡೆಯಿರಿ!
ಜನನ ಪ್ರಮಾಣ ಪತ್ರ ಸಂಬಂಧಿಸಿದ ಪ್ರಮುಖ ಸಲಹೆಗಳು:
- ಜನನ ಸಮಯದಲ್ಲೇ ಹೆಸರು, ದಿನಾಂಕ ಮತ್ತು ಪೋಷಕರ ವಿವರಗಳನ್ನು ನಿಖರವಾಗಿ ಖಚಿತಪಡಿಸಿಕೊಳ್ಳಿ.
- ಪ್ರಮಾಣ ಪತ್ರದಲ್ಲಿ ತಪ್ಪುಗಳಿದ್ದರೆ ತಕ್ಷಣ ಪರಿಶೀಲಿಸಿ, ತಿದ್ದುಪಡಿ ಮಾಡಿಸಿಕೊಂಡರೆ ಸಮಸ್ಯೆ ದೂರವಾಗುತ್ತದೆ.
- ಖಾಸಗಿ ಆಸ್ಪತ್ರೆಗಳಲ್ಲಿ ಜನಿಸಿದರೇ ಆಸ್ಪತ್ರೆ ರಿಜಿಸ್ಟ್ರೇಶನ್ ನಂಬರ್ ಪ್ರಮಾಣ ಪಾತ್ರದಲ್ಲಿ ನಮೂದಿಸುವುದು ಅಗತ್ಯವಾಗಿರುತ್ತದೆ.
- ಅಧಿಕೃತ ಕೆಲಸಕ್ಕೆ ಪ್ರಮಾಣಪತ್ರ ಸಲ್ಲಿಸುವಾಗ ಅದರಲ್ಲಿನ ಸ್ಪೆಲಿಂಗ್, ವಿವರಗಳನ್ನು ಚೆಕ್ ಮಾಡುವುದು ಅತ್ಯಂತ ಮುಖ್ಯ.
ಜನನ ಪ್ರಮಾಣಪತ್ರ ಅರ್ಜಿ ಸಲ್ಲಿಸುವ ಸ್ಥಳಗಳು:
- ಕರ್ನಾಟಕದ ಎಲ್ಲ ತಾಲೂಕುಗಳಲ್ಲಿ ಜನನ ಮತ್ತು ಮರಣ ನೋಂದಣಿ ಕಚೇರಿ,
- Seva Sindhu ಕೇಂದ್ರಗಳು,
- Nadakacheri ಮತ್ತು Grama One ಕೇಂದ್ರಗಳು.
ಜನನ ಪ್ರಮಾಣ ಪತ್ರವು ಜೀವನದ ಮೊದಲ ಅನಿವಾರ್ಯ ಅಧಿಕೃತ ದಾಖಲೆ. ಇದರಿಂದಲೇ ನಿಮ್ಮ ಮತ್ತು ನಿಮ್ಮ ಮಗುವಿನ ಹಕ್ಕುಗಳು, ಸುಳಭ್ಯಗಳನ್ನು ಪಡೆದುಕೊಳ್ಳಲು ಸಹಾಯಕವಾಗುತ್ತದೆ. ಆದ್ದರಿಂದ ಬೇಗ ಸರಿಯಾದ ದಾಖಲೆ ಪಡೆದುಕೊಳ್ಳಿ, ತಪ್ಪಿದ್ದರೆ ನೋಟರಿ ಪತ್ರದ ಸಹಾಯದಿಂದ ತಿದ್ದುಪಡಿ ಮಾಡಿಕೊಂಡು ನಿಮ್ಮ ಭವಿಷ್ಯವನ್ನು ಸುಗಮಗೊಳಿಸಿಕೊಳ್ಳಿ.