ಮಹಿಳೆಯರು ಮನೆಯಲ್ಲೇ ಕುಳಿತು ಆದಾಯ ಗಳಿಸಿ, ಆರ್ಥಿಕವಾಗಿ ಬಲಿಷ್ಠರಾಗಲು ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ದೊಡ್ಡ ಹೆಜ್ಜೆ ಇಡುತ್ತಿವೆ. ಗ್ರಾಮೀಣ-ನಗರ ಪ್ರದೇಶಗಳ ಮಹಿಳೆಯರಿಗೆ ಉಚಿತ ಹೊಲಿಗೆ ಯಂತ್ರ (Women Free Sewing Machine) ನೀಡುವ ಯೋಜನೆಗಳು ಜಾರಿಯಲ್ಲಿವೆ. ಇದೇ ರೀತಿಯ ಎಲ್ಲಾ ಮಾಹಿತಿಗೆ ನಮ್ಮ ಟೆಲಿಗ್ರಾಂ ಚಾನೆಲ್ಗೆ ಈ ಕೂಡಲೇ ಜಾಯಿನ್ ಆಗಿ ಕ್ಲಿಕ್ ಮಾಡಿ!
ಸಣ್ಣ ಪ್ರಯತ್ನದಿಂದಲೇ ಮಹಿಳೆಯರು ಆರ್ಥಿಕ ಸ್ವಾತಂತ್ರ್ಯ ಗಳಿಸಬಹುದು. ಒಂದು ಹೊಲಿಗೆ ಯಂತ್ರ ಕೇವಲ ಸಾಧನವಲ್ಲ, ಸಣ್ಣ ಉದ್ಯಮದ ಮೊದಲ ಹಂತದ ಬಂಡವಾಳ! ಈ ಯೋಜನೆಗಳು ಮಹಿಳೆಯರಿಗೆ ಸ್ವಾವಲಂಬಿ ಜೀವನ ಕಟ್ಟಿಕೊಡುತ್ತಿವೆ. ಉಚಿತ ಅಥವಾ ಸಬ್ಸಿಡಿ ದರದ ಹೊಲಿಗೆ ಯಂತ್ರಗಳ ವಿವರ, ಅರ್ಜಿ ವಿಧಾನ ಮತ್ತು ಅಗತ್ಯ ಮಾಹಿತಿಯನ್ನು ಇಲ್ಲಿದೆ.
ಪ್ರಮುಖ ಉಚಿತ ಹೊಲಿಗೆ ಯಂತ್ರ ವಿತರಣಾ ಯೋಜನೆಗಳು
ಮಹಿಳೆಯರು ಸುಲಭವಾಗಿ ಹೋಳಿಗೆ ಉದ್ಯೋಗವನ್ನು ಆರಂಭಿಸಿ, ಸ್ವಾವಲಂಭಿಯಾಗಿ ಜೀವನ ಸಾಗಿಸುವಂತಾಗಲಿ ಎಂದು ಸರಕಾರ ಮಹಿಳೆಯರಿಗೆ ಹೋಳಿಗೆ ಟಿ =ಯಂತ್ರ ಮತ್ತು ಉಚಿತ ತರಬೇತಿಯನ್ನು ಹಮ್ಮಿಕೊಳ್ಳುತ್ತದೆ. ಸರಕಾರದ ವಿವಿಧ ನಿಗಮಗಳು ಉಚಿತವಾಗಿ ಹೋಳಿಗೆ ಯಂತ್ರಗಳನ್ನೂ ನೀಡುತ್ತಿವೆ. ಕಾಲ ಕಾಲಕ್ಕೆ ಯಾವ ನಿಗಮ ಅರ್ಜಿ ಆಹ್ವಾನಿಸಿದೆ ಎಂಬುದನ್ನು ತಿಳಿದುಕೊಂಡು ಅರ್ಜಿ ಸಲ್ಲಿಸಿದಲ್ಲಿ ಹೋಳಿಗೆ ಯಂತ್ರಗಳು ಲಭ್ಯವಾಗಲಿವೆ. ಕರ್ನಾಟಕದ ಮಹಿಳೆಯರು ಹೊಲಿಗೆ ಯಂತ್ರ ಪಡೆಯಲು ಈ ಯೋಜನೆಗಳ ಮೂಲಕ ಅರ್ಜಿ ಸಲ್ಲಿಸಬಹುದು:
ಪ್ರಧಾನ ಮಂತ್ರಿ ವಿಶ್ವಕರ್ಮ ಯೋಜನೆ (PM Vishwakarma Yojana)
ಸಾಂಪ್ರದಾಯಿಕ ಕರಕುಶಲಕರ್ಮಿಗಳಿಗೆ ಬೆಂಬಲ ನೀಡುವ ಈ ಯೋಜನೆ ಹೊಲಿಗೆ ಮಾಡುವ ಮಹಿಳೆಯರಿಗೆ ಉತ್ತಮ ಅವಕಾಶವಾಗಿದೆ.
- ಅರ್ಹರಿಗೆ ಉಚಿತ ಕೌಶಲ್ಯ ತರಬೇತಿ, ತರಬೇತಿ ಸಮಯದಲ್ಲಿ ಸ್ಟೈಪೆಂಡ್ (ಮಾಸಿಕ ಭತ್ಯೆ).
- ತರಬೇತಿ ಮುಗಿದ ನಂತರ ಕೌಶಲ್ಯ ಪ್ರಮಾಣಪತ್ರ ಜೊತೆಗೆ ಉಚಿತ ಹೊಲಿಗೆ ಯಂತ್ರ ಮತ್ತು ಉಪಕರಣ ಕಿಟ್ ಸಿಗುತ್ತದೆ.
ಪ್ರಧಾನಮಂತ್ರಿ ಉದ್ಯೋಗ ಸೃಜನ ಯೋಜನೆ (PMEGP)
ಸಣ್ಣ ಉದ್ಯಮ ಅಥವಾ ಹೊಲಿಗೆ ಕೆಲಸ ಆರಂಭಿಸಲು ಬಯಸುವವರಿಗೆ ಇದು ದೊಡ್ಡ ನೆರವು.
- ಮಹಿಳೆಯರಿಗೆ ಶೇ.35 ಕ್ಕಿಂತಲೂ ಹೆಚ್ಚು ಸಬ್ಸಿಡಿ – ಹೊಲಿಗೆ ಯಂತ್ರ ಸೇರಿದಂತೆ ಉಪಕರಣಗಳ ಖರೀದಿಗೆ.
- ನಗರ/ಗ್ರಾಮೀಣದಲ್ಲಿ ಸಬ್ಸಿಡಿ ವ್ಯತ್ಯಾಸ, ಬ್ಯಾಂಕ್ ಸಾಲ ಮತ್ತು ಸರ್ಕಾರಿ ಸಬ್ಸಿಡಿ ಸಹಾಯದಿಂದ ಉದ್ಯಮ ಸ್ಥಾಪನೆ.
ಇದನ್ನೂ ಓದಿರಿ: ರೈತರಿಗೆ ಬಂಪರ್ ಕೊಡುಗೆ: ನಮ್ಮ ಹೊಲ ನಮ್ಮ ದಾರಿ ಯೋಜನೆಗೆ ಚಾಲನೆ! ಈಗ ನಿಮ್ಮ ಜಮೀನಿಗೂ ಸಿಗಲಿದೆ ಪಕ್ಕಾ ರಸ್ತೆ ಸಂಪರ್ಕ!
ರಾಜ್ಯ ಸರ್ಕಾರದ ಅಭಿವೃದ್ಧಿ ನಿಗಮಗಳ ಯೋಜನೆಗಳು
ಕರ್ನಾಟಕದ ದೇವರಾಜ ಅರಸು, ಒಕ್ಕಲಿಗ, ಲಿಂಗಾಯತ, ಪರಿಶಿಷ್ಟ ಜಾತಿ/ಪಂಗಡ, ಅಲ್ಪಸಂಖ್ಯಾತ, ಮರಾಠ, ವಿಶ್ವಕರ್ಮ ನಿಗಮಗಳು ನಿಯಮಿತವಾಗಿ ಉಚಿತ ಹೊಲಿಗೆ ಯಂತ್ರ ವಿತರಿಸುತ್ತವೆ.
- ನಿಗಮಗಳು ನಿರ್ದಿಷ್ಟ ಸಮಯದಲ್ಲಿ ಅರ್ಜಿ ಕರೆದುಕೊಳ್ಳುತ್ತವೆ. ಉದಾ: ಪ್ರಸ್ತುತ ಮರಾಠ ನಿಗಮ ಅರ್ಜಿ ಆಹ್ವಾನಿಸಿದೆ.
- ನಿಮ್ಮ ಸಮುದಾಯ ನಿಗಮದ ಯೋಜನೆಗಳನ್ನು ಗಮನಿಸಿ.
ಜಿಲ್ಲಾ ಕೈಗಾರಿಕಾ ಕೇಂದ್ರ ಯೋಜನೆ (ಗ್ರಾಮೀಣ ಕುಶಲಕರ್ಮಿಗಳಿಗಾಗಿ)
ಗ್ರಾಮೀಣ ಮಹಿಳಾ ಕುಶಲಕರ್ಮಿಗಳಿಗೆ ‘ವೃತ್ತಿಪರ ಕುಶಲಕರ್ಮಿಗಳಿಗೆ ಉಚಿತ ಸುಧಾರಿತ ಸಲಕರಣೆ ಸರಬರಾಜು ಯೋಜನೆ’ಯಡಿ ಹೊಲಿಗೆ ಯಂತ್ರ ಸಿಗುತ್ತದೆ.
- 2025-26ರಲ್ಲಿ ಹಲವು ಜಿಲ್ಲೆಗಳ ಅರ್ಜಿ ಮುಕ್ತಾಯ, ಆದರೆ ಕೋಲಾರದಂತಹ ಕೆಲವು ಜಿಲ್ಲೆಗಳಲ್ಲಿ ಇನ್ನೂ ಸ್ವೀಕಾರ.
ಉಚಿತ ಹೊಲಿಗೆ ಯಂತ್ರ ಪಡೆಯಲು ಅರ್ಹತಾ ಮಾನದಂಡಗಳು
ಅರ್ಜಿ ಸಲ್ಲಿಸಲು ಈ ಶರತ್ತುಗಳು:
- ವಯಸ್ಸು: 18-45 ವರ್ಷಗಳೊಳಗೆ.
- ವಾಸ: ಕರ್ನಾಟಕದ ಖಾಯಂ ನಿವಾಸಿ.
- ಪುನರಾವರ್ತನೆ ಇಲ್ಲ: ಹಿಂದೆ ಇದೇ ಯೋಜನೆಯ ಲಾಭ ಪಡೆದಿರಬಾರದು.
- ಆದಾಯ ಮಿತಿ: ಸರ್ಕಾರಿ ನೌಕರರ ಕುಟುಂಬ ಮಹಿಳೆಯರು ಅರ್ಹರಲ್ಲ.
- ಪ್ರಾಶಸ್ತ್ಯ: ಹೊಲಿಗೆ ತರಬೇತಿ ಪಡೆದವರಿಗೆ ಮೊದಲ ಆದ್ಯತೆ.
ಅರ್ಜಿ ಸಲ್ಲಿಸುವ ಸಂಪೂರ್ಣ ವಿಧಾನ
ಯೋಜನೆಗೆ ತಕ್ಕಂತೆ ವಿಧಾನ ಬದಲಾಗುತ್ತದೆ:
ಆನ್ಲೈನ್ ಅರ್ಜಿ (ವಿಶ್ವಕರ್ಮ, PMEGP, ನಿಗಮ ಯೋಜನೆಗಳು)
- ಗ್ರಾಮ ಒನ್, ಕರ್ನಾಟಕ ಒನ್ ಅಥವಾ ಬೆಂಗಳೂರು ಒನ್ ಕೇಂದ್ರಗಳಿಗೆ ಹೋಗಿ, ದಾಖಲೆಗಳೊಂದಿಗೆ ಅರ್ಜಿ ಸಲ್ಲಿಸಿ.
ಆಫ್ಲೈನ್/ನೇರ ಅರ್ಜಿ (ಜಿಲ್ಲಾ ಕೈಗಾರಿಕಾ ಕೇಂದ್ರ)
- ಜಿಲ್ಲಾ ಪಂಚಾಯತ್ನ ಗ್ರಾಮೀಣ ಕೈಗಾರಿಕೆ ವಿಭಾಗ ಉಪ ನಿರ್ದೇಶಕ ಕಚೇರಿಗೆ ಭೇಟಿ ನೀಡಿ, ದಾಖಲೆಗಳೊಂದಿಗೆ ಅರ್ಜಿ ಪೂರ್ಣಗೊಳಿಸಿ.
ಅರ್ಜಿಗೆ ಬೇಕಾಗುವ ಪ್ರಮುಖ ದಾಖಲೆಗಳು
- ಆಧಾರ್ ಕಾರ್ಡ್
- ಬ್ಯಾಂಕ್ ಪಾಸ್ಬುಕ್ ಪ್ರತಿ
- ಜಾತಿ/ಆದಾಯ ಪ್ರಮಾಣಪತ್ರ
- ಪಾಸ್ಪೋರ್ಟ್ ಸೈಜ್ ಫೋಟೋ
- ರೇಷನ್ ಕಾರ್ಡ್ ಅಥವಾ ವೋಟರ್ ID
- ಹೊಲಿಗೆ ತರಬೇತಿ ಪ್ರಮಾಣಪತ್ರ (ಇದ್ದರೆ)
ಇದು ಕೇವಲ ಸಾಧನವಲ್ಲ, ಹೊಸ ಅವಕಾಶ! ಉಚಿತ ಹೊಲಿಗೆ ಯಂತ್ರ ಯೋಜನೆಗಳು ಮಹಿಳೆಯರಿಗೆ ಸಣ್ಣ ವ್ಯವಹಾರ ಆರಂಭಿಸಲು ಬಲ ನೀಡುತ್ತವೆ. ಮನೆಯಲ್ಲೇ ಆದಾಯ ಗಳಿಸಲು ಸೂಪರ್ ಚಾನ್ಸ್. ಅರ್ಹರಾದರೆ ಈಗಲೇ ಅರ್ಜಿ ಸಲ್ಲಿಸಿ!
ಇದನ್ನೂ ಓದಿರಿ: ಹೊಸ ರೇಷನ್ ಕಾರ್ಡ್ ಅರ್ಜಿ 2025: ಯಾರಿಗೆ ಅವಕಾಶ? ಎಲ್ಲಿ ಅರ್ಜಿ ಸಲ್ಲಿಸಬೇಕು? ಸಂಪೂರ್ಣ ಮಾಹಿತಿ ಇಲ್ಲಿದೆ!
Nange holige machine beku
Nange hoige machine beku
ನನಗೆ ಹೊಲಿಗೆ ಮಷೀನ್ ಬೇಕು ಸರ್ ದೈವಿಟ್ಟು ಸಹಾಯ ಮಾಡಿ 🙏🏻🙏🏻🙏🏻
Nange holige machine beku .
ನನಗೆ ಹೊಲಿಗೆ ಮಷೀನ್ ಬೇಕು ಸರ್ ದೈವಿಟ್ಟು ಸಹಾಯ ಮಾಡಿ 🙏