---Advertisement---

ರಾಜ್ಯ ಸರ್ಕಾರದಿಂದ ಉಚಿತ ಹೊಲಿಗೆ ಯಂತ್ರ ವಿತರಣೆ ಅರ್ಜಿ ಆಹ್ವಾನ ಅರ್ಜಿ ಸಲ್ಲಿಸುವುದು ಹೇಗೆ? ಇಲ್ಲಿದೆ ಕಂಪ್ಲೀಟ್ ಡೀಟೇಲ್ಸ್

On: December 29, 2025 2:30 PM
Follow Us:
ಹೊಲಿಗೆ ಯಂತ್ರ

Join WhatsApp

Join Now

Join Telegram

Join Now

ಮನೆಯಲ್ಲೇ ಕುಳಿತು ಸ್ವಂತ ಆದಾಯ ಮಾಡ್ಬೇಕೆಂದು ಯೋಚಿಸ್ತಿದ್ದೀರಾ ? ಟೈಲರಿಂಗ್ ಹೊಲಿಗೆ ಕಲಿತಿದ್ದೀರಾ ಆದರೆ ಯಂತ್ರ ಕೊಳ್ಳೋ ಹಣ ಇಲ್ಲದೆ ಬಾಡಿಗೆ ಯಂತ್ರದಲ್ಲಿ ಕೆಲಸ ಮಾಡ್ತಿದ್ದೀರಾ?

ಇದಕ್ಕೆ ಈಗ ರಾಜ್ಯ ಸರ್ಕಾರದಿಂದ ಸಿಕ್ಕಿದೆ ಒಂದು ಸಕ್ಕತ್ತಾದ ಅವಕಾಶ. ಶಿವಮೊಗ್ಗ ಜಿಲ್ಲೆಯ ಹೊಸನಗರ ಪಟ್ಟಣ ಪಂಚಾಯಿತಿ ವ್ಯಾಪ್ತಿಯ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಸಮುದಾಯದವರಿಗೆ ಸರ್ಕಾರ ಉಚಿತ ಹೊಲಿಗೆ ಯಂತ್ರಗಳನ್ನು ವಿತರಿಸಲು ಅರ್ಜಿಗಳನ್ನು ಆಹ್ವಾನಿಸಿದೆ.

ಯೋಜನೆಯ ಮುಖ್ಯ ಉದ್ದೇಶ

ಹೊಸನಗರ ಪ್ರದೇಶದ SC & ST ಕುಟುಂಬಗಳ ಮಹಿಳೆಯರು ಹಾಗೂ ಯುವಕರು ಮನೆಮಟ್ಟದಲ್ಲೇ ಸ್ವಯಂ ಉದ್ಯೋಗ ಆರಂಭಿಸಿ, ತಮ್ಮದೇ ಆದ ಆದಾಯ ಮಾರ್ಗ ನಿರ್ಮಿಸಿಕೊಳ್ಳಲಿ ಎಂಬ ಉದ್ದೇಶ. ಈ ಅವಕಾಶವನ್ನು ಬಳಸಿಕೊಂಡು ಬ್ಯಾಂಕ್ ಸಾಲದ ಒತ್ತಡವಿಲ್ಲದೆ ಟೈಲರಿಂಗ್ ಕೆಲಸ ಶುರುಮಾಡಬಹುದಾಗಿದೆ.

ಯಾರಿಗೆ ಅರ್ಜಿ ಹಾಕೋ ಅವಕಾಶ ಇದೆ

1 ಹೊಸನಗರ ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ವಾಸಿಸುವವರು ಆಗಿರಬೇಕು.
2 ಪರಿಶಿಷ್ಟ ಜಾತಿ ಅಥವಾ ಪರಿಶಿಷ್ಟ ಪಂಗಡ .ಸಮುದಾಯಕ್ಕೆ ಸೇರಿದವರಾಗಿರಬೇಕು.
3 ಟೈಲರಿಂಗ್ ಹೊಲಿಗೆ ಕಲಿತವರು ಅಥವಾ ಕಲಿಯಲು ಆಸಕ್ತಿ ಇರುವವರು ಆದ್ರೆ ಹೆಚ್ಚು ಒತ್ತು ಸಿಗಬಹುದು.
4 2019 ರಿಂದ 2025 ಸಾಲಿನವರೆಗೆ SFC ಯೋಜನೆಯಡಿ ಉಳಿದಿರುವ ಅನುದಾನದಿಂದ ಈ ಯಂತ್ರಗಳನ್ನು ಕೊಡಲಾಗ್ತಿರುವುದರಿಂದ, ಮೊದಲು ಬರೋ ಅರ್ಜಿಗೆ ಮೊದಲ ಆದ್ಯತೆ ಸಿಗುವ ಸಾಧ್ಯತೆ ಇದೆ

ಅರ್ಜಿಯನ್ನು ಹೇಗೆ ಸಲ್ಲಿಸಬೇಕು

ಇದು ಸಂಪೂರ್ಣ ಆಫ್‌ಲೈನ್ ಪ್ರಕ್ರಿಯೆ. ಆನ್‌ಲೈನ್‌ನಲ್ಲಿ ಅರ್ಜಿ ಹಾಕುವ ವ್ಯವಸ್ಥೆ ಇಲ್ಲ.

1 ಹೊಸನಗರ ಪಟ್ಟಣ ಪಂಚಾಯಿತಿ ಕಚೇರಿಗೆ ನೇರವಾಗಿ ಹೋಗಿ.
2 ಅಲ್ಲಿ ಲಭ್ಯವಿರುವ ನಿಗದಿತ ಅರ್ಜಿ ಫಾರ್ಮನ್ನು ಕೌಂಟರ್ ನಲ್ಲಿ ಪಡೆದುಕೊಳ್ಳಿ.
3 ಅರ್ಜಿ ಫಾರ್ಮಿನಲ್ಲಿ ನಿಮ್ಮ ಹೆಸರು, ವಿಳಾಸ, ಜಾತಿ, ಮೊಬೈಲ್ ನಂಬರ್ ಮತ್ತು ಬೇರೆ ಮಾಹಿತಿ ಸರಿಯಾಗಿ ತುಂಬಿ.
4 ಅಗತ್ಯ ದಾಖಲೆಗಳ ಪ್ರತಿಯನ್ನು ಜೋಡಿಸಿ.
5 ಭರ್ತಿ ಮಾಡಿದ ಅರ್ಜಿಯನ್ನು ಕಚೇರಿಗೆ ಸಲ್ಲಿಸಿ, ಸ್ವೀಕರಿಸಿದ ದೃಢೀಕರಣವಾಗಿ acknowledgement ಪಡೆದುಕೊಳ್ಳಿ.

ಅಗತ್ಯ ದಾಖಲೆಗಳ ಪಟ್ಟಿ ಸೂಚನೆ

ಈ ಕೆಳಗಿನ ಡಾಕ್ಯುಮೆಂಟ್‌ಗಳನ್ನು xerox ಪ್ರತಿಯಾಗಿ ಇಟ್ಟುಕೊಂಡರೆ ಅರ್ಜಿ ಪ್ರಕ್ರಿಯೆ ಸುಲಭ ಆಗುತ್ತೆ

1 ಜಾತಿ ಪ್ರಮಾಣ ಪತ್ರ (Caste Certificate) – SC ಅಥವಾ ST ಎಂದು ಸ್ಪಷ್ಟವಾಗಿ ಇರಬೇಕು
2 ಆದಾಯ ಪ್ರಮಾಣ ಪತ್ರ – ಇತ್ತೀಚಿನ, ಚಾಲ್ತಿಯಲ್ಲಿರುವದು
3 ಆಧಾರ್ ಕಾರ್ಡ್ ನ ಪ್ರತಿಯು
4 ಹೊಸನಗರ ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ವಾಸವಿರುವುದಕ್ಕೆ ಸಾಕ್ಷಿ ವಿಳಾಸ ದಾಖಲೆ voter id ಅಥವಾ ration card ಪ್ರತಿಯು
5 ಪಾಸ್‌ಪೋರ್ಟ್ ಸೈಜ್ ಫೋಟೋ ಕೆಲವು ಪುಟಗಳು

ಕಚೇರಿಗೆ ಹೋಗುವಾಗ ಈ ಎಲ್ಲಾ ದಾಖಲೆಗಳ ಜೊತೆಗೆ original ಪತ್ರಗಳನ್ನೂ ಪರಿಶೀಲನೆಗಾಗಿ ಕೈಯಲ್ಲಿ ಇಟ್ಟುಕೊಂಡರೆ ಕೆಲಸ ಬೇಗ ಮುಗಿಯುತ್ತದೆ.

ಕೊನೆಯ ದಿನಾಂಕ
07 01 2026 ಜನವರಿ 7, 2026 ರವರಗೆ ಮಾತ್ರ ಅರ್ಜಿ ಸ್ವೀಕಾರ

ಅಧಿಕೃತ ಮಾಹಿತಿ ಸಿಗೋ ವೆಬ್‌ಸೈಟ್
www.hosanagaratown.mrc.gov.in

ನಿಗದಿತ ದಿನಾಂಕದ ನಂತರ ಬರುವ ಯಾವುದೇ ಅರ್ಜಿಯನ್ನು ಪರಿಗಣಿಸಲಾಗುವುದಿಲ್ಲ. ಆದ್ದರಿಂದ ಕೊನೆಯ ದಿನದವರೆಗು ಕಾಯದೇ, ಸಾಧ್ಯವಾದಷ್ಟು ಬೇಗ ಕಚೇರಿಗೆ ಹೋಗಿ ಫಾರ್ಮ್ ಪಡೆದು ಅರ್ಜಿ ಸಲ್ಲಿಸುವುದು ಉತ್ತಮ.

ಪದೇ ಪದೇ ಕೇಳಲಾಗುವ ಪ್ರಶ್ನೆಗಳು

ನಾನು ಆನ್‌ಲೈನ್ ಮೂಲಕ ಅರ್ಜಿ ಹಾಕ್ಕೊಳೋಕೆ ಆಗುತ್ತದೆಯಾ?

ಇಲ್ಲ. ಸದ್ಯದ ಪ್ರಕಟಣೆಯ ಪ್ರಕಾರ ಎಲ್ಲ ಅರ್ಜಿಗಳನ್ನೂ ಕೇವಲ ಆಫ್‌ಲೈನ್ ಮೂಲಕವೇ ಸ್ವೀಕರಿಸಲಾಗುತ್ತಿದೆ. ನೀವು ಹೊಸನಗರ ಪಟ್ಟಣ ಪಂಚಾಯಿತಿ ಕಚೇರಿಗೆ ಸ್ವತಃ ಹೋಗಿ, ಅಲ್ಲಿ ಅರ್ಜಿ ಪಡೆದು ಭರ್ತಿ ಮಾಡಿ ಸಲ್ಲಿಸಬೇಕು. ವೆಬ್‌ಸೈಟ್ ಮಾಹಿತಿ ಮತ್ತು ಪ್ರಕಟಣೆ ನೋಡಿಕೊಳ್ಳೋಕೆ ಮಾತ್ರ.

ಈ ಯಂತ್ರ ಯೋಜನೆ ಕೇವಲ ಮಹಿಳೆಯರಿಗೇನಾ, ಪುರುಷರು ಅರ್ಜಿ ಹಾಕ್ಬಾರದೆ ?

ಅಧಿಕೃತ ಪ್ರಕಟಣೆಯಲ್ಲಿ ಕೇವಲ ಮಹಿಳೆಯರಿಗೆ ಮಾತ್ರ ಎಂದು ಸ್ಪಷ್ಟವಾಗಿ ಬರೆಯದೇ ಇರುವುದರಿಂದ, SC ST ಸಮುದಾಯದ ಅರ್ಹ ಪುರುಷರು ಕೂಡಾ ಕಚೇರಿಗೆ ಹೋಗಿ ವಿಚಾರಿಸಿ ಅರ್ಜಿ ಸಲ್ಲಿಸಬಹುದು. ಆದರೆ practically ಹೊಲಿಗೆ ಯಂತ್ರ ಯೋಜನೆಗಳಲ್ಲಿ ಮಹಿಳೆಯರಿಗೆ ಹೆಚ್ಚಿನ ಆದ್ಯತೆ ಸಿಗೋದು ಸಾಮಾನ್ಯ. ಆದ್ದರಿಂದ ಗೃಹಿಣಿಯರು, ಯುವತಿಯರು, ವಿಧವೆಯರು, single women ಇವರೆಲ್ಲ ತನ್ನ ಹೆಸರು ನೋಂದಾಯಿಸಲು ಈ ಅವಕಾಶವನ್ನು ಖಂಡಿತ ಬಳಸಿಕೊಳ್ಳಬೇಕು.

Mahesh Kumar M.

ನಾನು 2020 ರಿಂದ ಡಿಜಿಟಲ್ ಪತ್ರಿಕೋದ್ಯಮದಲ್ಲಿ ತೊಡಗಿಸಿಕೊಂಡಿದ್ದೆನೆ. ಸಧ್ಯ gjiet.com ಮೂಲಕ ಓದುಗರಿಗೆ ನಿಖರ, ನೈಜ ಮತ್ತು ಸವಿವರವಾದ ಮಾಹಿತಿಯನ್ನು ತಲುಪಿಸುವ ಪ್ರಯತ್ನ ಮಾಡುತ್ತಿದ್ದೇನೆ. ವಿಶೇಷವಾಗಿ ಉದ್ಯೋಗ ಮತ್ತು ಸರಕಾರಿ ಯೋಜನೆಗಳ ಕುರಿತಾಗಿ ಆಳವಾದ ಅಧ್ಯಯನವನ್ನು ಮಾಡಿದ್ದು, ಓದುಗರಿಗೆ ಉದ್ಯೋಗದ ಮತ್ತು ಸರಕಾರಿ ಯೋಜನೆಗಳ ಮಾಹಿತಿಯನ್ನು ತಲುಪಿಸುವ ಗುರಿಯನ್ನು ಇಟ್ಟುಕೊಂಡಿದ್ದೇನೆ.

Latest Post

Leave a Comment