ಕರ್ನಾಟಕದ 1.26 ಕೋಟಿ ಬಡ ಕುಟುಂಬಗಳಿಗೆ ಸರ್ಕಾರದಿಂದ ಬಂಪರ್ ಗಿಫ್ಟ್! ಜನವರಿ ಅಥವಾ ಫೆಬ್ರವರಿ ಒಳಗೆ ಎಲ್ಲಾ ರೇಷನ್ ಅಂಗಡಿಗಳಲ್ಲಿ ಇಂದಿರಾ ಕಿಟ್ ವಿತರಣೆ ಶುರು ಆಗಲಿದೆ ಎಂದು ಆಹಾರ ಸಚಿವ ಕೆ.ಎಚ್. ಮುನಿಯಪ್ಪ ಅವರು (27 ಡಿಸೆಂಬರ್ 2025) ಘೋಷಿಸಿದ್ದಾರೆ.
ಒಂದೇ ಕಿಟ್ನಲ್ಲಿ ಏನೆಲ್ಲಾ ಸಿಗುತ್ತದೆ?
5 ಕೆಜಿ ಅಕ್ಕಿ, 1 ಕೆಜಿ ತೊಗರಿ ಬೆಳೆ, 1 ಕೆಜಿ ಸಕ್ಕರೆ, 1 ಕೆಜಿ ಉಪ್ಪು ದೊರೆಯಲಿದೆ.
ಅಂದಹಾಗೆ ಇದೆಲ್ಲವೂ ಉಚಿತ!
ಇದನ್ನೂ ಓದಿರಿ: Grama Panchayat Schemes: ಇಲ್ಲಿವೆ ನೋಡಿ ಗ್ರಾಮ ಪಂಚಾಯಿತಿ ಯೋಜನೆಗಳು! ಅರ್ಜಿ ಸಲ್ಲಿಸಿ ಲಾಭ ಪಡೆಯಿರಿ!
ಯಾರೆಲ್ಲಾ ಪಡೆಯಬಹುದು?
ಅನ್ನಭಾಗ್ಯ ಯೋಜನೆಯಡಿ ಬಿಪಿಎಲ್ ಪಡಿತರ ಚೀಟಿ ಹೊಂದಿರುವ ಎಲ್ಲಾ ಕುಟುಂಬಗಳು. ಒಟ್ಟು 4.48 ಕೋಟಿ ಜನರಿಗೆ ನೇರ ಲಾಭ!
ಹೊಸದಾಗಿ ಏನು ಸೇರಿಸಿದ್ದಾರೆ?
ಈ ಹಿಂದೆ ಕೇವಲ ಅಕ್ಕಿ ಕೊಡುತ್ತಿದ್ದರು. ಆದರೆ ಅನೇಕರು ಅಕ್ಕಿಯನ್ನು ಮಾರಿ ಬೇರೆ ಖರ್ಚಿಗೆ ಬಳಸುತ್ತಿದ್ದರು. ಈಗ ತೊಗರಿಬೇಳೆ, ಸಕ್ಕರೆ, ಉಪ್ಪು ಸೇರಿಸಿ ಪೂರ್ತಿ ಪೌಷ್ಟಿಕ ಆಹಾರ ಕಿಟ್ ಆಗಿ ಮಾಡಿದ್ದಾರೆ. ಮಕ್ಕಳು ಮತ್ತು ಮಹಿಳೆಯರ ಆರೋಗ್ಯಕ್ಕೆ ಇದು ದೊಡ್ಡ ವರದಾನ!
ಬಿಪಿಎಲ್ ಕಾರ್ಡ್ ರದ್ದಾಗಿದ್ದರೆ ಏನು ಮಾಡಬೇಕು?
ಚಿಂತೆ ಬೇಡ! ತಹಶೀಲ್ದಾರ್ ಕಚೇರಿಗೆ ಅರ್ಜಿ ಸಲ್ಲಿಸಿ. ಕೇವಲ 15 ದಿನಗಳಲ್ಲಿ ಪರಿಶೀಲನೆ ಮಾಡಿ ಮರು ಚೀಟಿ ಕೊಡುತ್ತಾರೆ. ಈಗಾಗಲೇ 50 ಲಕ್ಷ ಹೊಸ ಕುಟುಂಬಗಳನ್ನು ಸೇರಿಸುವ ಪ್ರಕ್ರಿಯೆ ನಡೆಯುತ್ತಿದೆ.
ಇದನ್ನೂ ಓದಿರಿ: ಹೋಂಡಾ ಆಕ್ಟಿವಾ ಮತ್ತೆ ಕಿಂಗ್ ನವೆಂಬರ್ 2025ರ ಟಾಪ್ 10 ಸ್ಕೂಟರ್ ಲಿಸ್ಟ್, ಹೊಸ ಸ್ಕೂಟರ್ ತಗೋಣ ಅಂದ್ರೆ ಇದನ್ನ ಒಮ್ಮೆ ಓದಿ ನೋಡಿ
ಕಳ್ಳರಿಗೆ ಸರ್ಕಾರದ ಕ್ರಮ
ಅಕ್ಕಿ ಕಳ್ಳ ಸಾಗಾಟಕ್ಕೆ ಬ್ರೇಕ್ ಹಾಕಲು ರಾತ್ರಿ ದಾಳಿ, ರೆಡ್ ಅಲರ್ಟ್! ಈಗಾಗಲೇ 574 ಜನರ ಬಂಧನ, ಕೋಟಿಗಟ್ಟಲೆ ರೂಪಾಯಿ ದಂಡ. ಇದರಿಂದ ಯೋಜನೆಯಲ್ಲಿ 20 ಪರ್ಸೆಂಟ್ ಹೆಚ್ಚು ಉಳಿತಾಯ ಆಗುತ್ತಿದೆ, ಹೆಚ್ಚು ಕುಟುಂಬಗಳಿಗೆ ನೇರ ತಲುಪುತ್ತಿದೆ.
ಈ ಹೊಸ ವರ್ಷಕ್ಕೆ – ನಿಮ್ಮ ಮನೆಗೆ ರೇಷನ್ ಕಿಟ್ ರೆಡಿಯಾಗಿ!
ಜನವರಿಯಿಂದಲೇ ರೇಷನ್ ಅಂಗಡಿಗೆ ಓಡಿ ಹೋಗಿ ಇಂದಿರಾ ಕಿಟ್ ತಗೋಬಹುದು. ಯಾವುದೇ ಗೊಂದಲ ಇದ್ದರೆ ನಿಮ್ಮ ತಾಲೂಕು ಆಹಾರ ಅಧಿಕಾರಿಗಳನ್ನು ಸಂಪರ್ಕಿಸಿ.
ನಿಮ್ಮ ಮನೆಯಲ್ಲಿ ಇನ್ನೂ ಬಿಪಿಎಲ್ ಕಾರ್ಡ್ ಇಲ್ಲವಾ? ಈಗಲೇ ಅರ್ಜಿ ಸಲ್ಲಿಸಿ, ಈ ಬಂಪರ್ ಲಾಭದಿಂದ ಹೊರಗುಳಿಯಬೇಡಿ!