ರೈತ ಬಂಧುಗಳೇ, ದೊಡ್ಡ ಸುವರ್ಣಾವಕಾಶ! ವಿದ್ಯುತ್ ಕೊರತೆಯಿಂದಾಗಿ ರಾತ್ರಿ ನೀರು ಹಾಯಿಸೋ ತಲೆನೋವು ಶಾಶ್ವತವಾಗಿ ಮುಗಿಯಿತು! ಕರೆಂಟ್ ಬಿಲ್ ಇಲ್ಲದೇ ಉಚಿತವಾಗಿ ಬಳಸುವ ಅವಕಾಶ. ಈ ಯೋಜನೆಯಿಂದಾಗಿ ನಿಮಗೆ 80% ಸಬ್ಸಿಡಿಯ ಜೊತೆಗೆ ಸೋಲಾರ್ ಪಂಪ್ಸೆಟ್ ಉಚಿತವಾಗಿ ನಿಮಗೆ ಸಿಗ್ತಿದೆ!
ಪ್ರಧಾನ ಮಂತ್ರಿ ಕುಸುಮ್-B ಯೋಜನೆ ಅಡಿಯಲ್ಲಿ ಉಚಿತ ಸೋಲಾರ್ ಪಂಪ್ ಸೆಟ್ ವಿತರಿಸಲಾಗುತ್ತಿದ್ದು, ಈಗಲೇ ಅರ್ಜಿ ಹಾಕಿರಿ. ಡಿಸೆಂಬರ್ ಅಂತ್ಯಕ್ಕೆ ಯೋಜನೆ ಮುಚ್ಚುವ ಸಾಧ್ಯತೆಯಿದ್ದು, ಅವಶ್ಯವಿರುವ ರೈತಬಾಂಧವರು ಈಗಲೇ ಈ ಯೋಜನೆಯಲ್ಲಿ ಪಾಲ್ಗೊಳ್ಳಲು ಕೋರಲಾಗಿದೆ.
ಪ್ರಧಾನಮಂತ್ರಿ ಕುಸುಮ್-B ಯೋಜನೆ ಎಂದರೇನು?
ಪ್ರಧಾನ ಮಂತ್ರಿ ಕಿಸಾನ್ ಊರ್ಜಾ ಸುರಕ್ಷಾ ಏವಂ ಉತ್ತಾನ್ ಮಹಾಭಿಯಾನ್ (PM-KUSUM) ಯೋಜನೆಯಡಿ ರಾಜ್ಯ ಮತ್ತು ಕೇಂದ್ರ ಸರಕಾರಗಳ ಸಹಯೋಗದೊಂದಿಗೆ ರೈತರಿಗೆ ಸೌರಶಕ್ತಿ ಆಧಾರಿತ ಪಂಪ್ಸೆಟ್ಗಳನ್ನು 80% ಸಬ್ಸಿಡಿಯಲ್ಲಿ ನೀಡಲಾಗುತ್ತಿದೆ. ಇದರಲ್ಲಿ:
ಕೇಂದ್ರ ಸರ್ಕಾರ: 30% ಸಬ್ಸಿಡಿ
ರಾಜ್ಯ ಸರ್ಕಾರ: 50% ಸಬ್ಸಿಡಿ
ರೈತರ ಪಾಲು: ಕೇವಲ 20% (₹40,000 – ₹50,000)
ಉದಾಹರಣೆ: ಒಂದು ಸೋಲಾರ್ ಪಂಪ್ ಬೆಲೆ ₹2 ಲಕ್ಷ ಆದರೆ, ನೀವು ಕೇವಲ ₹40,000 ಮಾತ್ರ ಕಟ್ಟಿದರೆ ಸಾಕು!
ಈ ಯೋಜನೆ ನಿಮಗೆ ಹೇಗೆ ಸಹಾಯ ಮಾಡುತ್ತದೆ?
- ರಾತ್ರಿ ಹೊತ್ತು ನೀರು ಹಾಯಿಸುವ ಕಷ್ಟ ತಪ್ಪುತ್ತದೆ!
- ಕರೆಂಟ್ ಬಿಲ್ ಶೂನ್ಯ! ಸೌರಶಕ್ತಿಯಿಂದ ಉಚಿತ ವಿದ್ಯುತ್!
- 80% ಸಬ್ಸಿಡಿ! ಕೇವಲ 20% ಹಣ ನಿಮ್ಮ ಪಾಲು!
- 7.5 HP ವರೆಗಿನ ಸೋಲಾರ್ ಪಂಪ್ ಸಿಗುತ್ತದೆ.
- ಗ್ರಿಡ್ ಸಂಪರ್ಕವಿಲ್ಲದ ಪ್ರದೇಶಗಳಲ್ಲಿಯೂ ಪಂಪ್ ಸೆಟ್ ಬಳಕೆ ಸಾಧ್ಯ.
ಅರ್ಜಿ ಸಲ್ಲಿಸಲು ಬೇಕಾದ ದಾಖಲೆಗಳು
- ಆಧಾರ್ ಕಾರ್ಡ್ (ಮೊಬೈಲ್ ನಂಬರ್ ಲಿಂಕ್ ಆಗಿರಬೇಕು)
- ಇತ್ತೀಚಿನ ಪಹಣಿ (RTC)
- ಬ್ಯಾಂಕ್ ಪಾಸ್ಬುಕ್
- ಪಾಸ್ಪೋರ್ಟ್ ಅಳತೆಯ ಫೋಟೋ
- ಸ್ವಯಂ ಘೋಷಣೆ ಪತ್ರ (Self Declaration)
ಯಾವ ಕಂಪನಿಯನ್ನು ಆಯ್ಕೆ ಮಾಡಬೇಕು? (ಅತಿ ಮುಖ್ಯ!)
ಪೋರ್ಟಲ್ನಲ್ಲಿ Vendor Selection ಬಂದಾಗ ಈ ಕಂಪನಿಗಳಲ್ಲಿ ಒಂದನ್ನು ಆರಿಸಿ:
- Tata Power Solar – ಅತ್ಯುತ್ತಮ ಸರ್ವಿಸ್, 25 ವರ್ಷ ಗ್ಯಾರಂಟಿ
- Shakti Pumps – ಅತಿ ವೇಗದ ಅಳವಡಿಕೆ, ರೈತರ ನಂ.1 ಆಯ್ಕೆ
- CRI Pumps – ಸ್ಥಳೀಯ ಸರ್ವಿಸ್ ಸೆಂಟರ್ ಜಾಲ
- Rotomag, Premier Energies ಕೂಡ ಲಭ್ಯ (ಜಿಲ್ಲೆಯಲ್ಲಿ ಲಿಸ್ಟ್ ಚೆಕ್ ಮಾಡಿ)
ನಿಮ್ಮ ಊರಿನಲ್ಲಿ ಯಾರ ಸರ್ವಿಸ್ ಚೆನ್ನಾಗಿದೆಯೋ ಅವರನ್ನೇ ಆರಿಸಿ – ನಂತರ ಬದಲಾಯಿಸಲು ಆಗಲ್ಲ!
ಮನೆಯಲ್ಲೇ ಕುಳಿತು 10 ನಿಮಿಷದಲ್ಲಿ ಅರ್ಜಿ ಸಲ್ಲಿಕೆ (Step-by-Step)
- ಅಧಿಕೃತ ವೆಬ್ಸೈಟ್ಗೆ ಹೋಗಿ: → souramitra.com
- ಮೊಬೈಲ್ + ಆಧಾರ್ OTP ದ್ವಾರಾ ರಿಜಿಸ್ಟರ್ ಆಗಿ
- RTC, ಆಧಾರ್, ಫೋಟೋ, ಬ್ಯಾಂಕ್ ಪಾಸ್ಬುಕ್ ಅಪ್ಲೋಡ್ ಮಾಡಿ
- Vendor ಆಯ್ಕೆ ಮಾಡಿ (Tata/Shakti/CRI)
- 20% ಹಣ ಆನ್ಲೈನ್ನಲ್ಲೇ ಕಟ್ಟಿ
- 90 ದಿನದೊಳಗೆ ಪಂಪ್ ನಿಮ್ಮ ಜಮೀನಿಗೆ ಫ್ರೀ ಅಳವಡಿಕೆ!
ಸಹಾಯವಾಣಿ (ತಕ್ಷಣ ಕರೆ ಮಾಡಿ)
KREDL ಹೆಲ್ಪ್ಲೈನ್: 080-22202100 / 8095132100
CESC ಹೆಲ್ಪ್ಲೈನ್: 9449598669
ಅಂತಿಮ ಸಲಹೆಗಳು
- ಯಾವುದೇ ಮಧ್ಯವರ್ತಿಗಳಿಗೆ ಹಣ ಕೊಡಬೇಡಿ!
- OTP ಯಾರಿಗೂ ಶೇರ್ ಮಾಡಬೇಡಿ!
- ಅಧಿಕೃತ ವೆಬ್ಸೈಟ್ನಿಂದ ಮಾತ್ರ ಅರ್ಜಿ ಸಲ್ಲಿಸಿ!
- ಹಣ ಪಾವತಿ ಆನ್ಲೈನ್ ಮೂಲಕವೇ ಮಾಡಿ!
ರೈತರೇ, ಈ ಅವಕಾಶವನ್ನು ಕಳೆದುಕೊಳ್ಳಬೇಡಿ! ಸೋಲಾರ್ ಪಂಪ್ ಪಡೆದು ಕರೆಂಟ್ ಬಿಲ್ ಉಳಿಸಿ, ಹಗಲಿನಲ್ಲಿ ಸುಲಭವಾಗಿ ನೀರು ಹಾಯಿಸಿ!
ಈ ಮಾಹಿತಿ ಉಪಯುಕ್ತವೆನಿಸಿದರೆ ಶೇರ್ ಮಾಡಿ!
Ok old home amount