ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷೆಯ ‘ಪಿಎಂ ವಿಶ್ವಕರ್ಮಾ ಯೋಜನೆ’ (PM Vishwakarma) ಎಲ್ಲೆಡೆ ಸಾವಿರಾರು ಕುಶಲಕರ್ಮಿಗಳಿಗೆ ಪ್ರೇರಣೆಯಾಗಿದೆ. ವಿಶೇಷವಾಗಿ ಹೊಲಿಗೆ (ಟೈಲರ್) ಮಾಡುವ ಮಹಿಳೆಯರಿಗೆ ಇದೊಂದು ವಿಶೇಷ ಉಡುಗೊರೆ.
ಮನೆಯಲ್ಲಿಯೇ ಹೊಲಿಗೆ ಕೆಲಸಮಾಡುತ್ತಿದ್ದೀರಾ?
ನೀವು ಮನೆಯಲ್ಲೇ ಹೊಲಿಗೆ ಕೆಲಸ ಮಾಡುತ್ತಿದ್ದರೆ ಅಥವಾ ಬಡಗಿ, ಕಮ್ಮಾರ, ಅಥವಾ ಇತರೆ ವೃತ್ತಿಗಳು ನಡೆಸುತ್ತಿದ್ದೀರಾ? ಸರಕಾರದಿಂದ ನಿಮ್ಮ ಪಾಲಿಗೆ ಸರಳ ಹಾಗೂ ನೇರ ಸಹಾಯ ಇದಾಗಿದೆ. ಸರ್ಕಾರ ನಿಮಗೆ ರೂ. 15,000 ಮೌಲ್ಯದ ಉಚಿತ ಟೂಲ್ ಕಿಟ್ (ಉಪಕರಣ) ನೀಡುತ್ತದೆ. ಜೊತೆಗೆ ಕಡಿಮೆ ಬಡ್ಡಿಯ ಸಾಲ ಸಹ ಲಭ್ಯವಿದ್ದು ರೂ. 3 ಲಕ್ಷವರೆಗೂ ಸಾಲ ಪಡೆಯಬಹುದು.
ಉಚಿತ ಹೊಲಿಗೆ ಯಂತ್ರ ಹೇಗೆ ಸಿಗುತ್ತದೆ?
“ಟೈಲರ್” ವಿಭಾಗದ ಅರ್ಜಿದಾರರಿಗೆ ರೂ. 15,000 ಮೌಲ್ಯದ e-voucher ಸರ್ಕಾರ ನೀಡುತ್ತದೆ. ಇದನ್ನು ಬಳಸಿ ನೀವು ಹೊಲಿಗೆ ಯಂತ್ರವನ್ನು ಉಚಿತವಾಗಿ ಖರೀದಿಸಬಹುದು. ಹಣದ ಬದಲಿಗೆ ವೌಚರ್ ನೀಡುವುದು ವಿಶೇಷ. ನೀವು ಹಣವನ್ನು ವಾಪಸು ನೀಡಬೇಕಾಗಿಲ್ಲ.
ಇದನ್ನೂ ಓದಿರಿ: ಆಧಾರ್ ಹೌಸಿಂಗ್ ಫೈನಾನ್ಸ್ ವಿಧ್ಯಾರ್ಥಿವೇತನ: ವಿಧ್ಯಾರ್ಥಿಗಳಿಗೆ 50,000 ರೂ. ವರೆಗಿನ ಆರ್ಥಿಕ ಸಹಾಯ
ಸರಕಾರದ ತಾಜಾ ದತ್ತಾಂಶ
ಕರ್ನಾಟಕದಲ್ಲಿ ಈಗಾಗಲೇ 5.7 ಲಕ್ಷಕ್ಕೂ ಹೆಚ್ಚಿನ ಕುಶಲಕರ್ಮಿಗಳು ಯೋಜನೆ ಮೂಲಕ ಲಾಭ ಪಡೆದಿದ್ದಾರೆ. ತುಮಕೂರು, ಕೋಲಾರ, ಚಾಮರಾಜನಗರ, ಚಿತ್ರದುರ್ಗ ಮತ್ತು ಬೀದರ ಜಿಲ್ಲೆಗಳು ಇದರಲ್ಲಿ ಮುಂದಿವೆ.
ಸಾಲ ಮತ್ತು ತರಬೇತಿ
ಈ ಯೋಜನೆ ಕೇವಲ ಉಪಕರಣ ವಿತರಿಸುವುದಕ್ಕಲ್ಲ, ನಿಮಗೆ 5–7 ದಿನಗಳ ಉಚಿತ ತರಬೇತಿಯನ್ನು ಕೊಡುವುದರೊಂದಿಗೆ, ತರಬೇತಿ ಆಯ್ಕೆ ಸಂದರ್ಭದಲ್ಲಿ ರೂ. 500 ಭತ್ಯೆಯೂ ಸಿಗುತ್ತದೆ.
ಸಾಲದ ಅನುಕೂಲತೆ:
- ಮೊದಲ ಹಂತ: ರೂ. 1 ಲಕ್ಷ ಸಾಲ, 18 ತಿಂಗಳ ಮರುಪಾವತಿ ಅವಧಿ
- ಎರಡನೇ ಹಂತ: ರೂ. 2 ಲಕ್ಷ ಸಾಲ, 30 ತಿಂಗಳ ಮರುಪಾವತಿ ಅವಧಿ
- ಬಡ್ಡಿ ದರ: ಕೇವಲ 5%
- ಗ್ಯಾರಂಟಿ ಅಥವಾ ಭದ್ರತೆ ಅಗತ್ಯವಿಲ್ಲ; ಸರ್ಕಾರವೇ ಖಾತರಿ.
ಯಾರು ಅರ್ಜಿ ಸಲ್ಲಿಸಬಹುದು?
ಈ ಯೋಜನೆಗೆ ಒಟ್ಟು 18 ವೃತ್ತಿ ಸೇರುತ್ತವೆ. ಪ್ರಮುಖವು,
- 1. ಟೈಲರ್ (ಹೊಲಿಗೆ ಯಂತ್ರ)
- 2. ಬಡಗಿ (Carpenter)
- 3. ಕಮ್ಮಾರ (Blacksmith)
- 4. ಅಕ್ಕಸಾಲಿಗ (Goldsmith)
- 5. ಕುಂಬಾರ (Potter)
- 6. ಚಮ್ಮಾರ (Cobbler)
- 7. ಕ್ಷೌರಿಕ (Barber)
- 8. ಮೀನು ಬಲೆ ನೇಯುವವರು
- 9. ಬುಟ್ಟಿ/ಚಾಪೆ ನೇಯುವವರು ಮತ್ತು ಇತರರು.
ಅರ್ಜಿ ಸಲ್ಲಿಸುವ ವಿಧಾನ
ಈ ಯೋಜನೆಗೆ ನೀವು ಸ್ವಯಂ ಮೊಬೈಲ್ ಮೂಲಕ ಅರ್ಜಿ ಹಾಕಲು ಸಾಧ್ಯವಿಲ್ಲ. CSC ಸೆಂಟರ್ ಅಥವಾ ಗ್ರಾಮ ಒನ್ ಕೇಂದ್ರಕ್ಕೆ ತೆರಳಬೇಕು. ಅಲ್ಲಿ ನೀವು ಸುಲಭವಾಗಿ ಅರ್ಜಿಯನ್ನು ಸಲ್ಲಿಸಲು ಸಾಧ್ಯವಾಗಲಿದೆ.
ಬೇಕಾಗುವ ದಾಖಲೆಗಳು:
- ಆಧಾರ್ ಕಾರ್ಡ್
- ರೇಷನ್ ಕಾರ್ಡ್
- ಬ್ಯಾಂಕ್ ಪಾಸ್ ಬುಕ್
- ಮೊಬೈಲ್ ನಂಬರ್ (ಆಧಾರ್ ಲಿಂಕ್ ಆಗಿರಬೇಕು)
ಅರ್ಜಿ ಸಲ್ಲಿಸಿದ ಬಳಿಕ ಗ್ರಾಮ ಪಂಚಾಯಿತಿ ಮತ್ತು ಜಿಲ್ಲಾ ಮಟ್ಟದಲ್ಲಿ ಪರಿಶೀಲನೆ ನಡೆಯುತ್ತದೆ. ಅಪ್ಪೇಟು ಸಿಗುತ್ತದೆಯೆಂದು ದೃಢವಾದ ಮೇಲೆ, ನಿಮಗೆ PM Vishwakarma ID ಕಾರ್ಡ್ ನೀಡಲಾಗುತ್ತದೆ.
ಪ್ರಮುಖ ಪ್ರಶ್ನೆಗಳ ಉತ್ತರಗಳು
ಹೊಲಿಗೆ ಯಂತ್ರ ನಿಜವಾಗಿಯೂ ಉಚಿತವೋ?
ಹೌದು, ₹15,000 ಮೌಲ್ಯದ ವೌಚರ್ ಮೂಲಕ ನೀವು ಖರೀದಿಸಬಹುದು.
ಅರ್ಜಿಯನ್ನು ಮೊಬೈಲ್ ಮೂಲಕ ಸಲ್ಲಿಸಲು ಸಾಧ್ಯವೋ?
ಇಲ್ಲ, ಕೇವಲ CSC/ಗ್ರಾಮ ಒನ್ ಕೇಂದ್ರ ಮೂಲಕಲೇ ಅರ್ಜಿ.
ಸಾಲಕ್ಕೆ ಬ್ಯಾಂಕ್ ಗ್ಯಾರಂಟಿ ಅಗತ್ಯ ಇದೆಯೇ?
ಇಲ್ಲ, ಸರ್ಕಾರವೇ ಗ್ಯಾರಂಟಿ.
ಎಷ್ಟು ದಿನಕ್ಕೆ ಟೂಲ್ ಕಿಟ್ ಸಿಗುತ್ತದೆ?
ಅರ್ಜಿ ನಂತರ 1–2 ತಿಂಗಳು ಒಳಗೆ ದೊರೆಯಬಹುದು.
ಪಿಎಂ ವಿಶ್ವಕರ್ಮ ಯೋಜನೆ ಮಹಿಳೆಯರ, ಕೃಷಿಕರ ಹಾಗೂ ಲಘು ಕೈಗಾರಿಕೆ ಕುಶಲಕರ್ಮಿಗಳ ಜೀವನವನ್ನು ಬದಲಿಸುವ ಮಾರ್ಗವಾಗಿದೆ. ನೀವು ಕೂಡ ಈ ಅವಕಾಶವನ್ನು ಬಳಸಿಕೊಂಡು ಯಶಸ್ವಿಯಾಗಿ ನಿಮ್ಮ ವ್ಯವಹಾರವನ್ನು ಬೆಳೆಸಿಕೊಳ್ಳಿ!
ನನಗೆ ಸ್ವಂತ ಉದ್ಯೋಗ ಮಾಡುವುದಕ್ಕೆ ನಂಗೆ ಸಬ್ಸಿಡಿ ಲೋನ್ ಬೇಕಾಗಿದೆ 🙏
I am tailor
👍
must be able to notice every small detail, from the alignment of patterns to the consistency of stices
Must be able to all small details of cloths
I am tailoring master
Tailer Machine want
Free meshion
I don’t want any kind of loan or money I want only tailoring machine
🙏 ಸರ್ ನಾನು 1 ವರ್ಷದ ಹಿಂದೆ ಅಪ್ಲಿಕೇಶನ್ ಆಕಿದ್ದೆ,ನಾನು ಮತ್ತೆ ಅಪ್ಲಿಕೇಶನ್ ಆಕ್ಬೇಕಾ,
Please ದಯವಿಟ್ಟು ತಿಳಿಸಿ