---Advertisement---

Ration Card Correction: ರೇಷನ್ ಕಾರ್ಡ ತಿದ್ದುಪಡಿ ಆರಂಭ! ಬೇಗ ಹೋಗಿ ತಿದ್ದುಪಡಿ ಮಾಡಿಸಿ!

On: December 29, 2025 11:03 PM
Follow Us:
ration card correction

Join WhatsApp

Join Now

Join Telegram

Join Now

ಭಾರತದಲ್ಲಿ ರೇಷನ್ ಕಾರ್ಡ್ ಅಂದ್ರೆ ಕೇವಲ ಪಡಿತರ ಪುಸ್ತಕ ಅಲ್ಲ, ಇದು ಮನೆಮಂದಿಯ ಆಧಾರ ದಾಖಲೆಯೂ ಆಗಿದೆ. ಅಕ್ಕಿ, ಗೋಧಿ, ಸಕ್ಕರೆ, ಗ್ಯಾಸ್, ಇನ್ನಿತರ ಸರ್ಕಾರಿ ಯೋಜನೆಗಳ ಲಾಭ – ಇವೆಲ್ಲಕ್ಕೂ ಸರಿಯಾದ ರೇಷನ್ ಕಾರ್ಡ್ ಇದ್ದರೆ ಮಾತ್ರ ಸಿಗಲು ಸಾಧ್ಯ. ಆದರೆ ರೇಷನ್ ಕಾರ್ಡ್ ತಿದ್ದುಪಡಿ ಅವಕಾಶವನ್ನು ಕೆಲ ತಿಂಗಳಿನಿಂದ ಸ್ಥಗಿತಗೊಸಲಾಗಿತ್ತು. ಇದು ಹಲವರಿಗೆ ತೊಂದರೆ ಉಂಟು ಮಾಡಿತ್ತು. ಸದ್ಯ ತಿದ್ದುಪಡಿಗೆ ಸರಕಾರ ಅವಕಾಶ ಕಲ್ಪಿಸಿದ್ದು, ತಿದ್ದುಪಡಿಗೆ ಏನೆಲ್ಲಾ ಅಗತ್ಯವಿದೆ ಎಂದು ತಿಳಿಸಲು ಈ ಲೇಖನ ಬರೆಯಲಾಗಿದೆ. ಕೊನೆಯವರೆಗೂ ಓದುವುದರಿಂದ ಈ ಕುರಿತು ಸಂಪೂರ್ಣ ಮಾಹಿತಿ ನಿಮಗೆ ತಿಳಿಯಲಿದ್ದು, ತಪ್ಪಿಲ್ಲದೆ ಅರ್ಜಿ ಸಲ್ಲಿಕೆಗೆ ಸಹಾಯವಾಗಲಿದೆ.

ಏನೆಲ್ಲಾ ತಿದ್ದಬಹುದು?

  • ಹೆಸರು ತಪ್ಪಿದ್ರೆ ಸರಿ ಮಾಡಿ
  • ವಿಳಾಸ ಬದಲಾಯ್ತು ಅಂದ್ರೆ ಅಪ್ಡೇಟ್ ಮಾಡಿ
  • ಮದುವೆಯಾದ ಮಗಳು/ಗಂಡು ಮಕ್ಕಳನ್ನು ತೆಗೆಯಿರಿ
  • ಹೊಸದಾಗಿ ಮಗು ಹುಟ್ಟಿದ್ರೆ ಹೆಸರು ಸೇರಿಸಿ
  • ಮೊಬೈಲ್ ನಂಬರ್ ಲಿಂಕ್ ಮಾಡಿ (ಇದು ಮುಖ್ಯ!)
  • BPL/APL ವರ್ಗ ಬದಲಾವಣೆ

ಆನ್‌ಲೈನ್‌ನಲ್ಲಿ ತಿದ್ದುಪಡಿ ಹೇಗೆ ಮಾಡೋದು? ಸೂಪರ್ ಸುಲಭ!

  1. ahara.kar.nic.in ತೆರೆಯಿರಿ
  2. e-Services → e-Ration Card → Correction Request ಕ್ಲಿಕ್ ಮಾಡಿ
  3. ರೇಷನ್ ಕಾರ್ಡ್ ನಂಬರ್ ಹಾಕಿ
  4. OTP ಬಂದ್ರೆ ಯಾವುದು ತಿದ್ದಬೇಕೋ ಆ ಆಪ್ಷನ್ ಸೆಲೆಕ್ಟ್ ಮಾಡಿ
  5. ಆಧಾರ್, ವಿಳಾಸ ಪುರಾವೆ ಫೋಟೋ ಅಪ್‌ಲೋಡ್ ಮಾಡಿ
  6. ಸಬ್‌ಮಿಟ್ → ಅದೇ ಕ್ಷಣ ಅಕ್ನಾಲೆಜ್‌ಮೆಂಟ್ ಸಿಗುತ್ತೆ

ಇದನ್ನೂ ಓದಿರಿ: Anna Bhagya: ಅನ್ನಭಾಗ್ಯ ಅಕ್ಕಿ ಪಡೆದುಕೊಳ್ಳುವವರೇ ಎಚ್ಚರ! ನೀವೂ ಈ ರೀತಿ ಮಾಡುತ್ತಿದ್ರೆ ಶಾಶ್ವತವಾಗಿ BPL ಕಾರ್ಡ್ ರದ್ದಾಗಲಿದೆ

ಆಫ್‌ಲೈನ್ ಹೋಗೋಕೆ ಇಷ್ಟ ಇದ್ರೆ

  • ಹತ್ತಿರದ ಬೆಂಗಳೂರು ಒನ್, ಕರ್ನಾಟಕ ಒನ್, ಗ್ರಾಮ ಒನ್ ಸೆಂಟರ್
  • ಆಹಾರ ಕಚೇರಿ ಅಥವಾ ತಾಲೂಕು ಆಫೀಸ್
  • ಶುಲ್ಕ ಕೇವಲ 20-50 ರೂಪಾಯಿ ಮಾತ್ರ

ಬೇಕಾದ ದಾಖಲೆಗಳು (ಜೆರಾಕ್ಸ್ + ಒರಿಜಿನಲ್ ತಗೊಂಡು ಹೋಗಿ)

  • ಆಧಾರ್ ಕಾರ್ಡ್
  • ವಿದ್ಯುತ್ ಬಿಲ್ / ವೋಟರ್ ಐಡಿ (ವಿಳಾಸಕ್ಕೆ)
  • ಮಗುವಿನ ಜನ್ಮ ಪ್ರಮಾಣಪತ್ರ
  • ಹಳೆಯ ರೇಷನ್ ಕಾರ್ಡ್

ತಿದ್ದುಪಡಿ ಸ್ಟೇಟಸ್ ಎಲ್ಲಿ ನೋಡೋದು?

ಅದೇ ahara.kar.nic.in → Check Status → ನಿಮ್ಮ ರೇಷನ್ ನಂಬರ್ ಹಾಕಿ, ಎಲ್ಲಾ ಲೈವ್ ತೋರಿಸುತ್ತದೆ!

ತಿದ್ದದೆ ಇದ್ರೆ ಏನಾಗುತ್ತೆ?

  • ಉಚಿತ ಅಕ್ಕಿ-ಬೇಳೆ ನಿಲ್ಲುತ್ತದೆ
  • ಗ್ಯಾಸ್ ಸಬ್ಸಿಡಿ ಬಂದ್
  • ಇಂದಿರಾ ಕಿಟ್, ಆಶ್ರಯ ಯೋಜನೆ ಎಲ್ಲಾ ಬ್ಲಾಕ್
  • ಆಧಾರ್ ಲಿಂಕ್ ಸಮಸ್ಯೆಯಿಂದ ಬ್ಯಾಂಕ್ ಖಾತೆಗೂ ತೊಂದರೆ

ಈಗಲೇ ಮೊಬೈಲ್ ತೆಗೆದು ahara.kar.nic.in ಓಪನ್ ಮಾಡಿ, 10 ನಿಮಿಷದಲ್ಲಿ ಎಲ್ಲಾ ತಿದ್ದುಪಡಿ ಮುಗಿಸಿ! ನಿಮ್ಮ ಫ್ಯಾಮಿಲಿ ಮೆಂಬರ್, ಗೆಳೆಯರಿಗೆಲ್ಲ ಈ ಸಂದೇಶ ಫಾರ್ವರ್ಡ್ ಮಾಡಿ, ಅವರಿಗೂ ಉಪಯೋಗವಾಗಲಿ.

Mahesh Kumar M.

ನಾನು 2020 ರಿಂದ ಡಿಜಿಟಲ್ ಪತ್ರಿಕೋದ್ಯಮದಲ್ಲಿ ತೊಡಗಿಸಿಕೊಂಡಿದ್ದೆನೆ. ಸಧ್ಯ gjiet.com ಮೂಲಕ ಓದುಗರಿಗೆ ನಿಖರ, ನೈಜ ಮತ್ತು ಸವಿವರವಾದ ಮಾಹಿತಿಯನ್ನು ತಲುಪಿಸುವ ಪ್ರಯತ್ನ ಮಾಡುತ್ತಿದ್ದೇನೆ. ವಿಶೇಷವಾಗಿ ಉದ್ಯೋಗ ಮತ್ತು ಸರಕಾರಿ ಯೋಜನೆಗಳ ಕುರಿತಾಗಿ ಆಳವಾದ ಅಧ್ಯಯನವನ್ನು ಮಾಡಿದ್ದು, ಓದುಗರಿಗೆ ಉದ್ಯೋಗದ ಮತ್ತು ಸರಕಾರಿ ಯೋಜನೆಗಳ ಮಾಹಿತಿಯನ್ನು ತಲುಪಿಸುವ ಗುರಿಯನ್ನು ಇಟ್ಟುಕೊಂಡಿದ್ದೇನೆ.

Leave a Comment