---Advertisement---

ಮಧ್ಯಮ ವರ್ಗದವರಿಗೆ ಅಂತಾನೆ ಹೇಳಿ ಮಾಡಿಸಿದ, ₹6 ಲಕ್ಷದೊಳಗೆ ಸಿಗುವ 5 ಬೆಸ್ಟ್ ಫ್ಯಾಮಿಲಿ ಕಾರುಗಳು

On: December 15, 2025 11:07 PM
Follow Us:
top-5-cheapest-cars-india

Join WhatsApp

Join Now

Join Telegram

Join Now

ಕಡಿಮೆ ಬೆಲೆ, ಹೆಚ್ಚು ಮೈಲೇಜ್! ಮಧ್ಯಮ ವರ್ಗದವರಿಗೆ ಹೇಳಿ ಮಾಡಿಸಿದ 5 ಕಾರುಗಳ ಮಾಹಿತಿ ಇಲ್ಲಿವೆ. ಕಾರು ಕೇವಲ ಐಷಾರಾಮಿ ವಸ್ತುವಲ್ಲ, ಅದೀಗ ಅವಶ್ಯಕತೆ. ಬಿಸಿಲು, ಮಳೆಯಲ್ಲಿ ಬೈಕ್ ಮೇಲೆ ಫ್ಯಾಮಿಲಿ ಕರೆದುಕೊಂಡು ಹೋಗುವ ಕಷ್ಟ ಮಧ್ಯಮ ವರ್ಗದ ತಂದೆಗೆ ಮಾತ್ರ ಗೊತ್ತಿರುತ್ತದೆ. ನಿಮಗೂ ಕಾರು ಕೊಳ್ಳುವ ಆಸೆ ಇದ್ದರೆ, ನಿಮ್ಮ ಜೇಬಿಗೆ ಹೊರೆಯಾಗದ ದೇಶದ ಅತ್ಯಂತ ಅಗ್ಗದ 5 ಕಾರುಗಳ ವಿವರ ಇಲ್ಲಿದೆ.

1. ಮಾರುತಿ ಸುಜುಕಿ ಆಲ್ಟೊ K10 (Maruti Suzuki Alto K10)

ಭಾರತದ “ಸಾಮಾನ್ಯ ಜನರ ಕಾರು” ಎಂದೇ ಹೆಸರಾಗಿರುವ ಆಲ್ಟೊ, ಇಂದಿಗೂ ನಂಬರ್ 1 ಸ್ಥಾನದಲ್ಲಿದೆ.

ಬೆಲೆ (Ex-Showroom): ಆರಂಭಿಕ ಬೆಲೆ ₹3.99 ಲಕ್ಷ.

ವಿಶೇಷತೆ: ಇದರಲ್ಲಿ 1.0-ಲೀಟರ್ ಪೆಟ್ರೋಲ್ ಎಂಜಿನ್ ಇದ್ದು, ಸಿಟಿ ರೈಡಿಂಗ್‌ಗೆ ಬೆಸ್ಟ್. ಕಡಿಮೆ ಮೇಂಟೆನೆನ್ಸ್ ಮತ್ತು ಹೆಚ್ಚು ಮೈಲೇಜ್ ಇದರ ಪ್ಲಸ್ ಪಾಯಿಂಟ್. ಸಣ್ಣ ಕುಟುಂಬಕ್ಕೆ (Small Family) ಇದು ಅತ್ಯುತ್ತಮ ಆಯ್ಕೆಯಾಗಿದೆ.

2. ಮಾರುತಿ ಎಸ್-ಪ್ರೆಸ್ಸೊ (Maruti Suzuki S-Presso)

Maruti Suzuki S-Presso

ಸ್ವಲ್ಪ ಎತ್ತರದ ಕಾರು (Mini SUV Look) ಬೇಕು ಎನ್ನುವವರಿಗೆ ಇದು ಬೆಸ್ಟ್ ಕಾರ್ ಆಗಿರುತ್ತದೆ. ಇದು ಮಿನಿ ಎಸ್ ಯು ವಿ ಲುಕ್ ನೀಡುತ್ತದೆ.

ಬೆಲೆ: ಆರಂಭಿಕ ಬೆಲೆ ₹4.26 ಲಕ್ಷ.

ವಿಶೇಷತೆ: ಆಲ್ಟೊ K10 ನಲ್ಲಿರುವ ಎಂಜಿನ್ ಇದ್ರಲ್ಲಿದ್ದರೂ, ಇದರ ವಿನ್ಯಾಸ ವಿಭಿನ್ನವಾಗಿದೆ. ರಸ್ತೆ ಗುಂಡಿಗಳಲ್ಲಿ ಓಡಿಸಲು ಇದರ ಗ್ರೌಂಡ್ ಕ್ಲಿಯರೆನ್ಸ್ ಸಹಾಯ ಮಾಡುತ್ತೆ.

ಯಾರಿಗೆ ಬೆಸ್ಟ್?: ಯುವಕರಿಗೆ ಮತ್ತು ಸ್ಟೈಲಿಶ್ ಲುಕ್ ಇಷ್ಟಪಡುವವರಿಗೆ ಈ ಕಾರು ಹೇಳಿ ಮಾಡಿಸಿದಂತಿದೆ.

3. ರೆನಾಲ್ಟ್ ಕ್ವಿಡ್ (Renault Kwid)

ನೋಡಲು ದುಬಾರಿ ಕಾರಿನಂತೆ ಕಾಣುವ, ಆದರೆ ಬಜೆಟ್ ಒಳಗೆ ಸಿಗುವ ಕಾರು ಇದು. ಸಾಮಾನ್ಯವಾಗಿ ಭಾರತದ ಮಾಧ್ಯಮ ವರ್ಗದವರಿಗೆ ಇಷ್ಟವಾಗುವ ಕಾರುಗಳಲ್ಲಿ ಇದೂ ಒಂದಾಗಿದೆ.

ಬೆಲೆ: ಆರಂಭಿಕ ಬೆಲೆ ₹4.69 ಲಕ್ಷ.

ವಿಶೇಷತೆ: 1.0-ಲೀಟರ್ ಎಂಜಿನ್ (68bhp ಪವರ್) ಹೊಂದಿದೆ. 5 ಲಕ್ಷದ ಒಳಗೆ ಸ್ಟೈಲಿಶ್ ಲುಕ್ ಮತ್ತು ಟಚ್ ಸ್ಕ್ರೀನ್ (Top variants) ಫೀಚರ್ಸ್ ಇದರಲ್ಲಿ ಸಿಗುತ್ತದೆ.

ಯಾರಿಗೆ ಬೆಸ್ಟ್?: ಮಾಡರ್ನ್ ಫೀಚರ್ಸ್ ಮತ್ತು ಸ್ಟೈಲ್ ಬೇಕು ಎನ್ನುವವರಿಗೆ.

ಇದನ್ನೂ ಓದಿರಿ: ಮೈಲೇಜ್‌ನಲ್ಲಿ ಹೊಸ ಚರಿತ್ರೆ! ಬರೋಬ್ಬರಿ 29.9 ಕಿ.ಮೀ. ಓಡಲಿದೆ ಟಾಟಾ ಸಿಯೆರಾ(Sierra): ಬೆಲೆ ಮತ್ತು ಫೀಚರ್ಸ್ ಕೇಳಿದ್ರೆ ಫಿದಾ ಆಗ್ತೀರಾ!

4. ಟಾಟಾ ಟಿಯಾಗೊ (Tata Tiago)

Tata Tiago

ನೀವು “ಸೇಫ್ಟಿ”ಗೆ (Safety) ಹೆಚ್ಚು ಮಹತ್ವ ಕೊಡುವುದಾದರೆ ಟಾಟಾ ಕಡೆಗೆ ಹೋಗಿ. ಈ ಕಾರು ಗಟ್ಟಿ ಮುಟ್ಟದ ಬಾಡಿ ಮತ್ತು ಏರ್ ಬ್ಯಾಗ್ ಗಳಿಂದ ಕೂಡಿದ್ದು, ಯಾವುದೇ ರೀತಿಯಲ್ಲಿಯೂ ಸುರಕ್ಷತೆಗೆ ದಕ್ಕೆಯಾಗದಂತೆ ತಯಾರಿಸಲಾಗಿದೆ.

ಬೆಲೆ: ಆರಂಭಿಕ ಬೆಲೆ ₹4.99 ಲಕ್ಷ (ಅಂದಾಜು 5 ಲಕ್ಷದ ಆಸುಪಾಸು).

ವಿಶೇಷತೆ: ಇದರಲ್ಲಿ 1.2-ಲೀಟರ್ ಪೆಟ್ರೋಲ್ ಎಂಜಿನ್ ಇದ್ದು, ಉಳಿದ ಕಾರುಗಳಿಗಿಂತ ಹೆಚ್ಚು ಪವರ್ (86bhp) ನೀಡುತ್ತದೆ. ಬಿಲ್ಡ್ ಕ್ವಾಲಿಟಿ ತುಂಬಾ ಗಟ್ಟಿಯಾಗಿದೆ. CNG ಆಯ್ಕೆ ಕೂಡ ಲಭ್ಯವಿದೆ.

ಯಾರಿಗೆ ಬೆಸ್ಟ್?: ಸುರಕ್ಷಿತ ಪ್ರಯಾಣ ಬಯಸುವ ಫ್ಯಾಮಿಲಿಗೆ.

5. ಮಾರುತಿ ಸೆಲೆರಿಯೊ (Maruti Suzuki Celerio)

ನೀವು “ನನಗೆ ಮೈಲೇಜ್ ಮಾತ್ರ ಮುಖ್ಯ” ಎನ್ನುವವರಾದರೆ ಸೆಲೆರಿಯೊ ನೋಡಿ. ಈ ಕಾರು ಬರೋಬ್ಬರಿ 26.68 kmpl ಮೈಲೇಜ್ ನೀಡುವುದರೊಂದಿಗೆ ಭಾರತೀಯ ಮಾಧ್ಯಮ ವರ್ಗದವರನ್ನು ತನ್ನತ್ತ ಸೆಳೆದುಕೊಂಡಿದೆ.

ಬೆಲೆ: ಆರಂಭಿಕ ಬೆಲೆ ₹5.36 ಲಕ್ಷ.

ವಿಶೇಷತೆ: ಇದು ಪೆಟ್ರೋಲ್ ಉಳಿಸುವಲ್ಲಿ ಎತ್ತಿದ ಕೈ. ಇದರ ಡಿಸೈನ್ ಕೂಡ ಈಗ ಬದಲಾಗಿದ್ದು, ಫ್ಯಾಮಿಲಿ ಬಳಕೆಗೆ ತುಂಬಾ ಚೆನ್ನಾಗಿದೆ.

Mahesh Kumar M.

ನಾನು 2020 ರಿಂದ ಡಿಜಿಟಲ್ ಪತ್ರಿಕೋದ್ಯಮದಲ್ಲಿ ತೊಡಗಿಸಿಕೊಂಡಿದ್ದೆನೆ. ಸಧ್ಯ gjiet.com ಮೂಲಕ ಓದುಗರಿಗೆ ನಿಖರ, ನೈಜ ಮತ್ತು ಸವಿವರವಾದ ಮಾಹಿತಿಯನ್ನು ತಲುಪಿಸುವ ಪ್ರಯತ್ನ ಮಾಡುತ್ತಿದ್ದೇನೆ. ವಿಶೇಷವಾಗಿ ಉದ್ಯೋಗ ಮತ್ತು ಸರಕಾರಿ ಯೋಜನೆಗಳ ಕುರಿತಾಗಿ ಆಳವಾದ ಅಧ್ಯಯನವನ್ನು ಮಾಡಿದ್ದು, ಓದುಗರಿಗೆ ಉದ್ಯೋಗದ ಮತ್ತು ಸರಕಾರಿ ಯೋಜನೆಗಳ ಮಾಹಿತಿಯನ್ನು ತಲುಪಿಸುವ ಗುರಿಯನ್ನು ಇಟ್ಟುಕೊಂಡಿದ್ದೇನೆ.

Latest Post

emergency-loan-up-to-5-lakh-through-google-pay

ಗೂಗಲ್ ಪೇ ಬಳಸ್ತೀರಾ? ಆಪತ್ಕಾಲಕ್ಕೆ ನಿಮ್ಮ ಮೊಬೈಲ್‌ನಲ್ಲೇ ಇದೆ 5 ಲಕ್ಷ ರೂಪಾಯಿ ಸಾಲ! ಪಡೆಯುವುದು ಹೇಗೆ? ಆಧಾರ್ ಕಾರ್ಡ್ ಇದ್ದರೆ ಸಾಕು!

New Rules: ಸಾರ್ವಜನಿಕರ ಗಮನಕ್ಕೆ, ನಾಳೆಯಿಂದಲೇ ಈ 12 ಪ್ರಮುಖ ನಿಯಮಗಳಲ್ಲಿ ಮಹತ್ವದ ಬದಲಾವಣೆ !

ಜಿಯೋ । jio-new-plan-103-rupees-offer

ಬಂಪರ್ ಆಫರ್! ಜಿಯೋದಿಂದ ಕೇವಲ ₹103ಕ್ಕೆ 28 ದಿನ ಅನ್‌ಲಿಮಿಟೆಡ್ ಕರೆ + 5GB ಡೇಟಾ + 10ಕ್ಕೂ ಹೆಚ್ಚು ಉಚಿತ OTT ಚಾನಲ್ ಗಳು

top-10-scooters-sales-november-2025

ಹೋಂಡಾ ಆಕ್ಟಿವಾ ಮತ್ತೆ ಕಿಂಗ್ ನವೆಂಬರ್ 2025ರ ಟಾಪ್ 10 ಸ್ಕೂಟರ್ ಲಿಸ್ಟ್, ಹೊಸ ಸ್ಕೂಟರ್ ತಗೋಣ ಅಂದ್ರೆ ಇದನ್ನ ಒಮ್ಮೆ ಓದಿ ನೋಡಿ

ಹೀರೋ ಸ್ಪ್ಲೆಂಡರ್ ಪ್ಲಸ್

ಹೀರೋ ಸ್ಪ್ಲೆಂಡರ್ ಪ್ಲಸ್ ಕೇವಲ 5,000 ರೂ ಡೌನ್ ಪೇಮೆಂಟ್ ಗೆ ನಿಮ್ಮದಾಗಿಸಿಕೊಳ್ಳಿ! ಕಡಿಮೆ ಇಎಂಐ, ಹೆಚ್ಚಿನ ಮೈಲೇಜ್

sovereign gold bond scheme

ಚಿನ್ನದ ಹೂಡಿಕೆಗೆ ಅತ್ಯುತ್ತಮ ಆಯ್ಕೆ ಸಾವರಿನ್ ಗೋಲ್ಡ್ ಬಾಂಡ್ ಬಡ್ಡಿ ಮತ್ತು ತೆರಿಗೆ ವಿನಾಯಿತಿ ಲಾಭ ಪಡೆಯಿರಿ

Leave a Comment