ನಮ್ಮ ರಾಜ್ಯದ ಆರ್ಥಿಕವಾಗಿ ಹಿಂದುಳಿದ ವರ್ಗದ ಜನರಿಗೆ ವೈದ್ಯಕೀಯ ಸೌಲಭ್ಯ ಒದಗಿಸಲು ಯಶಸ್ವಿನಿ ಯೋಜನೆ ಜಾರಿಯಲ್ಲಿದೆ. 2025-26 ನೇ ಸಾಲಿಗೆ ಸದಸ್ಯರ ನೋಂದಣಿ ಪ್ರಕ್ರಿಯೆ ಆರಂಭವಾಗಿದ್ದು, ಅರ್ಹ ಫಲಾನುಭವಿಗಳು ಯಶಸ್ವಿನಿ ಕಾರ್ಡ ಪಡೆಯಲು ಅರ್ಜಿ ಸಲ್ಲಿಸಬಹುದು.
ನೋಂದಣಿ ಅವಧಿ – ದಿನಾಂಕ 03 ಜನವರಿ 2026 ರಿಂದ ದಿನಾಂಕ 31 ಮಾರ್ಚ 2026 ರವರೆಗೆ ಅವಕಾಶ ಕಲ್ಪಿಸಲಾಗಿದೆ.
ಅರ್ಹತೆ ಮಾನದಂಡಗಳು
- ಕರ್ನಾಟಕದ ಖಾಯಂ ನಿವಾಸಿಯಾಗಿರಬೇಕು
- ರಾಜ್ಯದ ಯಾವುದೇ ಸಹಕಾರಿ ಸಂಘದಲ್ಲಿ ಕನಿಷ್ಠ 3 ತಿಂಗಳು ಸದಸ್ಯರಾಗಿರಬೇಕು
- ಕೇಂದ್ರ ಅಥವಾ ರಾಜ್ಯ ಸರ್ಕಾರಿ ನೌಕರರು ಅರ್ಜಿ ಸಲ್ಲಿಸಲು ಬರುವುದಿಲ್ಲ
- ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುವವರ ಮಾಸಿಕ ವೇತನ ರೂ.30,000 ಕ್ಕಿಂತ ಹೆಚ್ಚಿರಬಾರದು
ಅರ್ಜಿ ಸಲ್ಲಿಸುವ ಸ್ಥಳಗಳು - ನಿಮ್ಮ ಹತ್ತಿರದ ವ್ಯವಸಾಯ ಸೇವಾ ಸಹಕಾರಿ ಸಂಘ ಅಥವಾ KMF ಹಾಲಿನ ಡೈರಿ ಕಚೇರಿಗೆ ಭೇಟಿ ನೀಡಿ
ಇದನ್ನೂ ಓದಿರಿ: ಸರ್ವೆ ಆಫೀಸ್‌ಗೆ ಅಲೆದಾಡೋದು ಬೇಡ: 1 ನಿಮಿಷದಲ್ಲಿ ನಿಮ್ಮ ಜಮೀನಿನ ಇ-ಸ್ಕೆಚ್ ಡೌನ್ಲೋಡ್ ಮಾಡಿ
ಅಗತ್ಯ ದಾಖಲೆಗಳು
- ಆಧಾರ್ ಕಾರ್ಡ್ ಪ್ರತಿ
- ಭಾವಚಿತ್ರ
- ಬ್ಯಾಂಕ್ ಪಾಸ್ ಬುಕ್
- ಕುಟುಂಬದ ರೇಶನ್ ಕಾರ್ಡ್
- ಮೊಬೈಲ್ ನಂಬರ್
- ನೋಂದಣಿ ಶುಲ್ಕ
ಸಾಮಾನ್ಯ ಕುಟುಂಬ (4 ಸದಸ್ಯರು) : ವಾರ್ಷಿಕ ರೂ.500
ಹೆಚ್ಚುವರಿ ಪ್ರತಿ ಸದಸ್ಯರಿಗೆ : ರೂ.100
ನಗರ ಸಹಕಾರ ಸಂಘಗಳು : 4 ಸದಸ್ಯರ ಕುಟುಂಬಕ್ಕೆ ರೂ.1000, ಹೆಚ್ಚುವರಿ ಪ್ರತಿ ಸದಸ್ಯರಿಗೆ ರೂ.200
ಪರಿಶಿಷ್ಟ ಜಾತಿ/ಪಂಗಡ ಮತ್ತು ಗಿರಿಜನರಿಗೆ : ಸರ್ಕಾರದಿಂದ ಶುಲ್ಕ ಭರಿಸಲಾಗುವುದು.
ಯೋಜನೆಯ ಪ್ರಯೋಜನಗಳು
ಯಶಸ್ವಿನಿ ಟ್ರಸ್ಟ್ ಗುರ್ತಿಸಿದ 1650 ಚಿಕಿತ್ಸೆಗಳು ಮತ್ತು 478 ICU ಚಿಕಿತ್ಸೆಗಳು ಸೇರಿದಂತೆ ಒಟ್ಟು 2128 ಚಿಕಿತ್ಸೆಗಳು ಲಭ್ಯ. ರಾಜ್ಯದಲ್ಲಿ ನೋಂದಾಯಿಸಿದ ಯಶಸ್ವಿನಿ ನೆಟ್‌ವರ್ಕ್ ಆಸ್ಪತ್ರೆಗಳಲ್ಲಿ ಮಾತ್ರ ಚಿಕಿತ್ಸೆ ಪಡೆಯಬಹುದು.
ಪ್ರಮುಖ ನಿಯಮಗಳು
ಚಿಕಿತ್ಸೆ ಪಡೆಯುವ ಮುನ್ನ ಆಸ್ಪತ್ರೆ ಯೋಜನೆಯಡಿ ಒಳಪಟ್ಟಿರುವುದನ್ನು ಖಾತ್ರಿಪಡಿಸಿಕೊಳ್ಳಿ
ಯೋಜನೆಯಲ್ಲಿ ಒಳಪಡದ ಚಿಕಿತ್ಸೆಗಳಿಗೆ ಟ್ರಸ್ಟ್ ಜವಾಬ್ದಾರರಾಗುವುದಿಲ್ಲ
ಕೇವಲ ಜನರಲ್ ವಾರ್ಡ್ ಚಿಕಿತ್ಸೆ ವೆಚ್ಚ ಮಾತ್ರ ಭರಿಸಲಾಗುವುದು
ಸ್ಪೆಷಲ್ ವಾರ್ಡ್/ಸೆಮಿ ಸ್ಪೆಷಲ್ ವಾರ್ಡ್ ಹೆಚ್ಚುವರಿ ವೆಚ್ಚ ಫಲಾನುಭವಿಗಳೇ ಭರಿಸಬೇಕು
ಎರಡು ಜೀವಂತ ಮಕ್ಕಳು ಅಥವಾ ಎರಡು ಹರಿಗೆ ಮಾತ್ರ ಯೋಜನೆಯ ಸೌಲಭ್ಯ ದೊರೆಯುತ್ತದೆ
ಅರ್ಜಿ ಸಲ್ಲಿಸುವ ಮುನ್ನ ನಿಮ್ಮ ಸಹಕಾರಿ ಸಂಘದ ಸದಸ್ಯತ್ವ ಮಾಹಿತಿ ಖಚಿತಪಡಿಸಿಕೊಳ್ಳಿ. ಮಾರ್ಚ್ 31, 2026 ರೊಳಗೆ ಅರ್ಜಿ ಸಲ್ಲಿಸಿ, ಯಶಸ್ವಿನಿ ಯೋಜನೆಯ ಪ್ರಯೋಜನ ಪಡೆಯಿರಿ.